ನೇಪಾಳದಲ್ಲಿ ಭಾರೀ ಘರ್ಷಣೆ : 25 ಕಾರ್ಯಕರ್ತರಿಗೆ ಗಾಯ, 70 ಜನರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Nepal-01

ಕಠ್ಮಂಡು, ಡಿ.8-ಉದ್ದೇಶಿತಿ ಸಂವಿಧಾನ ತಿದ್ದುಪಡಿ ವಿರುದ್ಧ ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ಉಗ್ರ ಸ್ವರೂಪಕ್ಕೆ ತಿರುಗಿದ್ದು, ಪೊಲೀಸರ ಜೊತೆ ನಡೆದ ಭೀಕರ ಘರ್ಷಣೆಯಲ್ಲಿ ಪ್ರಮುಖ ವಿರೋಧಪಕ್ಷವಾದ ಸಿಪಿಎನ್-ಯುಎಂಎಲ್‍ನ 25ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ 70ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  ಹಿಮಾಲಯ ರಾಷ್ಟ್ರದ ಕೈಲಾಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ಘರ್ಷಣೆ ನಡೆದಿದೆ. ಸಂಘರ್ಷದ ನಂತರ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಗೊಂಡಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಿಪಿಎನ್-ಯುಎಂಎಲ್ ಸರ್ಕಾರವನ್ನು ಆಗ್ರಹಿಸಿದೆ.  ಪೌರತ್ವ ಮತ್ತು ಹೊಸ ಪ್ರಾಂತ್ಯ ರಚಿಸಬೇಕೆಂದು ಮಾಧೇಸಿ ಪಕ್ಷಗಳು ಮತ್ತು ಇತರ ಜನಾಂಗೀಯ ಬಣಗಳ ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದವು. ಇವುಗಳಲ್ಲಿ ಕೆಲವನ್ನು ಈಡೇರಿಸುವ ಉದ್ದೇಶದೊಂದಿಗೆ ನೇಪಾಳ ಪ್ರಧಾನಮಂತ್ರಿ ಪ್ರಚಂಡ ನೇತೃತ್ವದ ಸಮ್ಮಿಶ್ರ ಸರ್ಕಾರವು ಸಂವಿಧಾನ ತಿದ್ದುಪಡಿ ನಿರ್ಣಯವನ್ನು ಕಳೆದ ವಾರ ಅಂಗೀಕರಿಸಿತ್ತು.  ಇದರ ವಿರುದ್ಧ ಆಗಿನಿಂದಲೂ ಸಿಪಿಎನ್-ಯುಎಂಎಲ್ ಪ್ರತಿಭಟನೆ ನಡೆಸುತ್ತಲೇ ಇದೆ. ನೇಪಾಳದ ಪ್ರತಿಪಕ್ಷಗಳಾದ ಯುಎಂಎಲ್, ಸಿಪಿಎನ್-ಎಂಎಲ್, ರಾಷ್ಟ್ರೀಯ ಜನಮೋರ್ಚ ಮತ್ತು ನೇಪಾಳ ವರ್ಕರ್ಸ್ ಪೀಸೆಂಟ್ಸ್ ಪಾರ್ಟಿ ನಿನ್ನೆ ಉದ್ದೇಶಿಗತ ಸಂವಿಧಾನ ತಿದ್ದುಪಡಿ ವಿರುದ್ಧ ಸಂಸತ್ ಕಲಾಪಗಳಿಗೆ ಅಡ್ಡಿ ಉಂಟು ಮಾಡಿದ್ದವು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin