ನೈಋತ್ಯ ಮುಂಗಾರು ಮಳೆಯಿಂದ ಕಬಿನಿ, ಕೆಆರ್‍ಎಸ್ ಜಲಾಶಯದ ನೀರಿನ ಹರಿವು ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

KSRS-Dam

ಮೈಸೂರು, ಜೂ.29- ಸತತ ಬರಗಾಲದಿಂದ ತತ್ತರಿಸಿ ರಾಜ್ಯದ ಜಲಾಶಯಗಳು ಬತ್ತಿಹೋಗಿದ್ದವು. ಇದರಿಂದ ಭೀಕರ ಬರಗಾಲಕ್ಕೆ ಸಿಲುಕಿ ರೈತರುಯಾತನೆ ಅನುಭವಿಸಿದ್ದರು. ಆದರೆ, ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರಂತೆ ಕಾವೇರಿ, ಕಬಿನಿ ಜಲಾಶಯ ಭಾಗಗಳಲ್ಲಿ ನಿರಂತರವಾಗಿ ನೈಋತ್ಯ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜಸಾಗರ, ಕಬಿನಿ ಜಲಾಶಯದ ನೀರಿನ ಒಳ ಅರಿವು ಹೆಚ್ಚಾಗಿದೆ.

4 ಸಾವಿರ ಕ್ಯುಸೆಕ್ ನೀರು ಹೆಚ್ಚಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ಕೆಆರ್‍ಎಸ್ ಡ್ಯಾಮ್‍ನ ನೀರಿನ ಮಟ್ಟ ಹೆಚ್ಚಾಗಲಿದೆ. ಗರಿಷ್ಟ ಮಟ್ಟ 124.85ರಷ್ಟಿದ್ದು, ಇದೀಗ 68.85ರಷ್ಟು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇನ್ನು ಕೇರಳದ ವೈನಾಡು ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದ್ದು, ಗರಿಷ್ಠ ಮಟ್ಟ 2,285 ಇದ್ದು, ಇಂದಿನ ಮಟ್ಟ 2,257 ಅಡಿಗಳಷ್ಟು ನೀರು ಬಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಸುರಿದಂತೆ ಇನ್ನೂ ಹೆಚ್ಚು ನೀರು ಬರಲಿದೆ ಎಂದು ಕಬಿನಿ ಜಲಾಶಯದ ಎಂಜಿನಿಯರ್‍ಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin