ನೈಜೀರಿಯಾದಲ್ಲಿ 5 ಲಕ್ಷ ಮಕ್ಕಳು ಹಸಿವಿನಿಂದ ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

Nigeria

ಲಾಗೋಸ್, ಡಿ.14-ಬೊಕೋ ಹರಂ ಉಗ್ರರ ದಾಳಿಗೆ ತತ್ತರಿಸಿರುವ ಈಶಾನ್ಯ ನೈಜೀರಿಯಾದಲ್ಲಿ ಮುಂದಿನ ವರ್ಷ ಘೋರ ಸಂಕಷ್ಟ ಎದುರಾಗಲಿದ್ದು, ಭಯೋತ್ಪಾದಕರ ನಿರಂತರ ಉಪಟಳದಿಂದ ಐದು ಲಕ್ಷಕ್ಕೂ ಹೆಚ್ಚುಮಕ್ಕಳು ಹಸಿವಿನಿಂದ ಬಳಲುವ ಭೀಕರ ಸನ್ನಿವೇಶ ಸೃಷ್ಟಿಯಾಗಲಿದೆ ಅಲ್ಲದೆ ಮಾನವೀಯ ನೆರವು ಲಭಿಸದೆ 80 ಸಾವಿರ ಮಕ್ಕಳು ಬಲಿಯಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ. ನೈಜೀರಿಯಾದಲ್ಲಿ ಅದರಲ್ಲೂ ಈಶಾನ್ಯ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಉಗ್ರರು ಪ್ರಜೆಗಳ ಮೇಲೆ ತೀವ್ರ ದೌರ್ಜನ್ಯ ನಡೆಸುತ್ತಾ ಹಿಂಸಿಸುತ್ತಿದ್ದಾರೆ. ನೈಜೀರಿಯಾದಲ್ಲಿ ಇಸ್ಲಾಂ ಧರ್ಮಸ್ಥಾಪನೆಗೆ ಮುಂದಾಗಿರುವ ಬೊಕೋ ಹರಂ ಉಗ್ರರು ಭೀಕರ ದಾಳಿ ನಡೆಸಿ ಆ ಪ್ರಾಂತ್ಯವನ್ನು ನರಕ ಸದೃಶ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಲ್ಲಿನ ವಾಸ್ತವ ಚಿತ್ರಣವನ್ನು ಬಯಲುಗೊಳಿಸಿದೆ.

Nigeria-01

ಉಗ್ರರಿಂದ ಮುಂದಿನ ವರ್ಷದ ವೇಳೆಗೆ 5 ಲಕ್ಷ ಮಕ್ಕಳು ಹಸಿವಿನಿಂದ ಕಂಗಾಲಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಯುನಿಸೆಫ್‍ನ ಮಕ್ಕಳ ವಿಭಾಗದ ನಿರ್ವಾಹಕ ನಿರ್ದೇಶಕ ಆಂಥೋಣಿ ಲೇಕ್ ತೀವ್ರ ಕಳವಳವ್ಯಕ್ತಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin