ನೈಜ ಘಟನೆಯ ಖರಾಬ್ ದುನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Kharab-Duniya

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಖರಾಬ್ ದುನಿಯಾ ಆರಂಭವಾಗಿದೆ. ಇದೇನಪ್ಪಾ ಅಂತ ಆಶ್ಚರ್ಯವಾಯಿತೇ, ಇದು ಹೊಸದಾಗಿ ಸೆಟ್ಟೇರಿರುವ ಕನ್ನಡ ಚಲನ ಚಿತ್ರವೊಂದರ ಶೀರ್ಷಿಕೆ. ವಿಕಾಸ್ ಮದಕರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವಿಕಾಸ್ ಮದಕರಿ ಈ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಯೋಗೀಶ್ ಹಾಗೂ ಶೇಖರ್ ಈ ಚಿತ್ರದ ನಿರ್ಮಾಪಕರು. ವಿಕಾಸ್ ಮದಕರಿ ಈ ಹಿಂದೆ ಕೋಮಲಿ ಎಂಬ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು.

ಇದು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ. ಕಳೆದ ಏಳೆಂಟು ವರ್ಷಗಳಿಂದಲೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿಕಾಸ್ ಮದಕರಿ ನಿರ್ದೇಶಕ ಭವಾನಿಶಂಕರ್ ಸೇರಿದಂತೆ ಕೆಲ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಕೆಲ ವರ್ಷಗಳ ಹಿಂದೆ ವಿಲ್ಸನ್ ಗಾರ್ಡನ್ ಏರಿಯಾದಲ್ಲಿ ಒಂದು ರೇಪ್ ಅಂಡ್ ಮರ್ಡರ್ ಕೇಸ್ ನಡೆದಿತ್ತು.   ಅದೇ ಘಟನೆಯನ್ನು ಆಧಾರವಾಗಿಟ್ಟು ಕೊಂಡು ಈ ಚಿತ್ರಕ್ಕೆ ಕಥಾಹಂದರವನ್ನು ಹೆಣೆದಿದ್ದೇವೆ ಎಂದು ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಕಾಸ್ ಮದಕರಿ ಹೇಳಿಕೊಂಡರು.

ಈ ಚಿತ್ರದ ನಾಯಕಿ ಪಾತ್ರದಲ್ಲಿ ಸಂಹಿತಾ ವಿನ್ಯಾ ಅಭಿನಯಿಸುತ್ತಿದ್ದು, ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಮು ಖ್ಯತೆ ಇದೆ ಎಂಬುದಾಗಿಯೂ ಅವರು ಹೇಳಿಕೊಂಡರು. ಮನುಷ್ಯನ ಜೀವನದಲ್ಲಿ ಪೂರಕವಾದ ಮತ್ತು ಮಾರಕವಾದಂಥ ಹಲವಾರು ಘಟನೆಗಳು ಜರುಗುತ್ತವೆ. ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗುವುದು. ಮೂಲಕಥೆಯಲ್ಲಿ ಸಿನಿಮಾಟಿಕ್ ಆಗಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಸ್ಕ್ರಿಪ್ಟ್ ರಚಿಸಿರುವುದಾಗಿಯೂ ಅವರು ಹೇಳಿಕೊಂಡರು. ಚಿತ್ರದ ಆರಂಭದಲ್ಲಿ ನಾಯಕ-ನಾಯಕಿ ಇಬ್ಬರೂ ಕೆಏಎಸ್ ಸ್ಟೂಡೆಂಡ್ಸ್ ಆಗಿರುತ್ತಾರೆ.ನಂತರ ಅವರ ಪಾತ್ರಗಳು 3 ಷೇಡ್ಸ್ ತೆಗೆದುಕೊಳ್ಳುತ್ತವೆ. ಹಿರಿಯ ನಟ ಅವಿನಾಶ್ ಈ ಚಿತ್ರದಲ್ಲಿ ಒಬ್ಬ ಪಪೊಲೀಸ್ ಕಮೀಷನರ್ ಆಗಿ ಕಾಣಿಸಿಕೊಂಡಿದ್ದಾರೆ. ಶೋಭ್‍ರಾಜ್, ಬಿರಾದಾರ್, ಹೊನ್ನವಳ್ಳಿ ಕೃಷ್ಣ ಮುಂತಾದವರು ಉಳಿದ ಪಾತ್ರವರ್ಗದಲ್ಲಿ ನಟಿಸುತ್ತಿದ್ದಾರೆ. ವೀನಸ್ ಮೂರ್ತಿ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ವಿಲಿಯಂ ಡ್ರೂಥ್ ಈ ಚಿತ್ರದ 5 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin