ನೈತಿಕತೆ ಇದ್ದರೆ ಸಿಎಂ ಹಾಗೂ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು : ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಹುಬ್ಬಳ್ಳಿ ಫೆ.24- ನೈತಿಕತೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ.  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಆರೋಪಗಳೆಲ್ಲ ಡೈರಿಯಲ್ಲಿ ಬಹಿರಂಗಗೊಂಡಿವೆ. ಬಿಜೆಪಿಯವರನ್ನು ಬೆತ್ತಲು ಮಾಡುತ್ತೇವೆ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಎದುರು ತಾವೇ ಬೆತ್ತಲಾಗಿದ್ದಾರೆ ಎಂದು ದೂರಿದರು.  ಸಂಪುಟದ ಅನೇಕ ಸಚಿವರ ಹೆಸರುಗಳು ಡೈರಿಯಲ್ಲಿ ಬಹಿರಂಗಗೊಂಡಿವೆ.

ಇನ್ನಾದರೂ ಸಿಎಂ ಆಪ್ತ ಗೋವಿಂದರಾಜು ಹೈಕಮಾಂಡಿಗೆ ಕಪ್ಪ ಕೊಟ್ಟಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಗೋವಿಂದರಾಜು ಅವರನ್ನು ಮಂಪರು ಪರೀಕ್ಷಗೆ ಒಳಪಡಿಸದರೆ ಸತ್ಯಾಂಶ ಹೊರಬರುಲು ಸಾಧ್ಯ. ಡೈರಿಯಲ್ಲಿ ಪ್ರಮುಖ ಖಾತೆ ಹೊಂದಿರುವ ಸಚಿವರುಗಳ ಹೆಸರುಗಳೇ ಬಹಿರಂಗಗೊಂಡಿವೆ. ಬಿಎಸ್‍ವೈ ಅವರನನು ಮಾನಸಿಕ ಅಸ್ವಸ್ಥ ಎನ್ನುತ್ತಿದ್ದ ಕಾಂಗ್ರೆಸ್ಸಿಗರೇ ಸಧ್ಯ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕಾಂಗ್ರೆಸ್‍ನ ಎಲ್ಲ ನಾಯಕರನ್ನು ನಿಮ್ಹಾನ್ಸ್‍ಗೆ ದಾಖಲಿಸಬೇಕು ಎಂದರು.  ಕಾಂಗ್ರೆಸ್ ಕಪ್ಪ ಹಗರಣದ ಕುರಿತು ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೈ ನಡೆಸಿ ಮುಂದಿನ ಹೋರಾಟದ ರೂಪರೇಷೆ ಮಾಡಲಾಗುವುದು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin