ನೈರ್ಮಲ-ಪರಿಸರದ ಕಾಳಜಿ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

kaduru8

ಕಡೂರು, ಸೆ..12- ನೈರ್ಮಲ್ಯ ಮತ್ತು ಪರಿಸರದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಡಿ.ಎಸ್. ರವಿ ಹೇಳಿದರು.ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಮತ್ತು ಇಂಟರ್ಯಾಕ್ಟ್ ಕ್ಲಬ್‍ಗಳು ಏರ್ಪಡಿಸಿದ್ದ ರೋಟರಿ ಜಿಲ್ಲಾ ಇಂಟರ್ಯಾಕ್ಟ್ ಅಸೆಂಬ್ಲಿ ತರಬೇತಿ ಕಾರ್ಯಾಗಾರ ಉದ್ಟಾಟಿಸಿ ಮಾತನಾಡಿದರು.ಭಾರತ ದೇಶ ಬೇರೆ-ಬೇರೆ ವಿಷಯಗಳಲ್ಲಿ ಮುಂಚೂಣಿಗೆ ಬರುತ್ತಿದೆ, ಆದರೆ ನೈರ್ಮಲ್ಯದ ವಿಷಯದಲ್ಲಿ ಹಿಂದೆ ಬಿದ್ದಿದೆ, ಇದು ವಿಷಾಧನೀಯ ಸಂಗತಿ, ಈ ಹಿನ್ನೆಯಲ್ಲಿ ರೋಟರಿ ಸಂಸ್ಥೆ ಪ್ರಕೃತಿ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಒತ್ತು ನೀಡಿದೆ ಎಂದರು.

ರೋಟರಿ ಇಂಟರ್ಯಾಕ್ಟ್ ಜಿಲ್ಲಾ ಉಪಸಭಾಪತಿ ಅರುಣ್‍ಕುಮಾರ್‍ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳನ್ನು ನಾಯಕರನ್ನಾಗಿ ರೂಪಿಸಿ ಮುಖ್ಯವಾಹಿನಿಗೆ ತರುವ ಜೊತೆಗೆ ಸಾಮಾಜಿಕ ಚಿಂತನೆ ಮತ್ತು ಸೇವಾ ಪ್ರವೃತ್ತಿಯನ್ನು ಬೆಳೆಸುವ ಚಿಂತನೆಯೊಂದಿಗೆ ಇಂಟರ್ಯಾಕ್ಟ್ ಅಸೆಂಬ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ರೋಟರಿ ಇಂಟರ್ಯಾಕ್ಟ್ ಜಿಲ್ಲಾ ಸಭಾಪತಿ ಕೆ.ಬಿ. ದ್ವಾರಕನಾಥಬಾಬು ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲಿ ಪ್ರತಿಭೆ ಇರುತ್ತದೆ, ಅದಕ್ಕೆ ಸೂಕ್ತ ವೇದಿಕೆ ಕೊರತೆಯಿರುತ್ತದೆ, ಅದನ್ನು ಹೊರ ಹೊಮ್ಮಿಸುವ ಕಾರ್ಯದ ಜೊತೆಗೆ ಆ ಮಕ್ಕಳಲ್ಲಿ ನಾಯಕತ್ವದ ಗುಣ ಮತ್ತು ಅವರ ಬೆಳೆವಣಿಗೆಗೆ ಸ್ಫೂರ್ತಿ ತುಂಬುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ರೋಟರಿ ಅಧ್ಯಕ್ಷ ಕ.ಗೋ. ಮಂಜುನಾಥ್, ಇಂಟರ್ಯಾಕ್ಟ್ ಅಸೆಂಬ್ಲಿ ಸಂಚಾಲಕ ಎಸ್. ಕೃಷ್ಣಮೂರ್ತಿ, ಯುವಜನ ಸೇವಾ ನಿರ್ದೇಶಕರಾದ ಕೆ. ವಿನುತಾಬಾಬು, ಕಾರ್ಯದರ್ಶಿ ಕೆ. ವಿನಯಕುಮಾರ್, ವಲಯ ಅಧಿಕಾರಿ ಜಯಂತ್, ಡಾ. ಸುರೇಂದ್ರನಾಥ್, ಸೂರಿಶ್ರೀನಿವಾಸ್, ರೋಟರಿ ಇನ್ನರ್‍ವೀಲ್ ಸದಸ್ಯರು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin