ನೈಸ್ ಟೋಲ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

N-ews--21

ಬೆಂಗಳೂರು, ಜು.24-ಟೋಲ್ ದರ ದಿಢೀರ್ ಏರಿಕೆ ಮಾಡಿರುವ ನಿರ್ಧಾರ ಖಂಡಿಸಿ ಇಂದು ನೂರಾರು ರೈತರು ನೈಸ್ ರಸ್ತೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಗಡಿರಸ್ತೆಯಲ್ಲಿ ಕಿಲೋಮೀಟರ್ ಉದ್ದದ ವಾಹನಗಳ ದಟ್ಟಣೆ ಉಂಟಾಗಿತ್ತು. ಕೆಲ ದಿನಗಳ ಹಿಂದೆ ನಂದಿ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆ ನೈಸ್ ರಸ್ತೆಯ ಟೋಲ್ ದರವನ್ನು ಏಕಾಏಕಿ ಶೇ.33ರಷ್ಟು ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.  ಟೋಲ್ ದರ ಏರಿಕೆ ಇಳಿಕೆ ಮಾಡುವಂತೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮಾಡಿಕೊಂಡ ಮನವಿಗೆ ನೈಸ್ ಸಂಸ್ಥೆಯವರು ಕವಡೆ ಕಾಸಿನ ಕಿಮ್ಮತ್ತೂ ನೀಡಿರಲಿಲ್ಲ.

ನೈಸ್ ಸಂಸ್ಥೆಯವರ ಈ ಧೋರಣೆ ಖಂಡಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಗಿರೀಶ್‍ಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ರಮೇಶ್‍ಗೌಡ ನೇತೃತ್ವದಲ್ಲಿ ರಾಜ್ಯ ರೈತ ಸಂಘದ ನೂರಾರು ಪದಾಧಿಕಾರಿಗಳು, ಕನ್ನಡಪರ ಹೋರಾಟಗಾರರು ಇಂದು ಮಾಗಡಿರಸ್ತೆಯ ದೊಡ್ಡಗೊಲ್ಲರಹಟ್ಟಿ ಸಮೀಪದ ನೈಸ್ ರಸ್ತೆಗೆ ಮುತ್ತಿಗೆ ಹಾಕಿದರು. ಕೆಲ ಹೋರಾಟಗಾರರು ನೆಲಮಂಗಲದಿಂದ ದೊಡ್ಡಗೊಲ್ಲರಹಟ್ಟಿಗೆ ಮೆರವಣಿಗೆಯಲ್ಲಿ ಧಾವಿಸಿದರೆ, ಮತ್ತೊಂದು ತಂಡ ದೊಡ್ಡಗೊಲ್ಲರಹಟ್ಟಿ ಮೂಲಕ ನೈಸ್ ರಸ್ತೆಯಲ್ಲೇ ಮಾದಾವರದವರೆಗೂ ಮೆರವಣಿಗೆ ನಡೆಸಿದರು.

ರೈತರ ಮುತ್ತಿಗೆ ಹಿನ್ನೆಲೆಯಲ್ಲಿ ನೈಸ್ ರಸ್ತೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ರಾಮನಗರ ಎಸ್‍ಪಿ ರಮೇಶ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿತ್ತು.  ರೈತರ ಮುತ್ತಿಗೆ ಹಿನ್ನೆಲೆಯಲ್ಲಿ ಮಾಗಡಿರಸ್ತೆಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ದೊಡ್ಡಗೊಲ್ಲರಹಟ್ಟಿಯಿಂದ ಕಾಮಾಕ್ಷಿಪಾಳ್ಯದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸವಾರರು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಸಾಧ್ಯವಾಗದೆ ಪರಿತಪಿಸುವಂತಾಯಿತು.

ನೈಸ್ ರಸ್ತೆ ಈ ಹಿಂದೆ ನಿಗದಿಪಡಿಸಿದ್ದ ಟೋಲ್ ದರವೇ ದುಬಾರಿಯಾಗಿತ್ತು. ಇದೀಗ ಮತ್ತೆ ಶೇ.33ರಷ್ಟು ಏರಿಕೆ ಮಾಡಿರುವುದು ದುರಾದೃಷ್ಟವೇ ಸರಿ. ಕೂಡಲೇ ಸಂಸ್ಥೆಯವರು ದರ ಏರಿಕೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin