ನೋಟಿಗಾಗಿ ಬಂದವರಿಗೆ ಲಾಠಿ ಏಟು ಕೊಟ್ಟ ಪೊಲೀಸಪ್ಪ ಸಸ್ಪೆನ್ಡ್

ಈ ಸುದ್ದಿಯನ್ನು ಶೇರ್ ಮಾಡಿ

Suspend-01

ಲಖನೌ, ನ.24– ನೋಟಿಗಾಗಿ ಬ್ಯಾಂಕ್ ಎದುರು ನಿಂತವರ ಮೇಲೆ ಪೊಲೀಸ್ ದರ್ಪ ತೋರಿ ಮಹಿಳೆಯರು, ಮೃದ್ಧರು ಎಂದು  ನೋಡದಂತೆ ಹಿಗ್ಗಾ ಮುಗ್ಗಾ  ಲಾಠಿ ಬೀಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಹಣ ವಿನಿಮಯ ಮಾಡಿಕೊಳ್ಳಲು ಜನಜಂಗುಳಿ ಸೇರಿರುವ ಕಡೆ ಪರಿಸ್ಥಿತಿಯನ್ನು ಸಹನೆಯಿಂದ ನಿಭಾಯಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪೊಲೀಸರಿಗೆ ಸೂಚನೆ ನೀಡಿದ್ದರೂ, ಅಮಾಯಕ ನಾಗರಿಕರಿಗೆ ಲಾಠಿ ಏಟು ನೀಡುವ ದರ್ಪವನ್ನು ಪೊಲೀಸರು ಮುಂದುವರಿಸಿದ್ದಾರೆ.  ಫತೇಪುರ್‍ನಲ್ಲಿ ಬ್ಯಾಂಕ್ ಮುಂದೆ ನಿಂತಿದ್ದ ಗ್ರಾಹಕರ ಮೇಲೆ ಮನಸೋಇಚ್ಚೆ ಲಾಠಿಯಿಂದ ಹಲ್ಲೆ ಮಾಡಿದ್ದ, ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.

ಪೊಲೀಸರು ಸಂಬಲ್ ಮತ್ತು ಭಾಗ್ಪತ್ ನಗರಗಳಲ್ಲೂ ತಮ್ಮ ಕೌರ್ಯವನ್ನು ಪುನರಾವರ್ತನೆ ಮಾಡಿದ್ದಾರೆ. ವೃದ್ಧರು ಮತ್ತು ಮಹಿಳೆಯರ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.  ಈ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin