ನೋಟು ಅಪನಗದೀಕರಣದ ನಡುವೆಯೂ ಕೈಗಾರಿಕಾ ಉತ್ಪಾದನೆ ಶೇ.5.7ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Industry

ನವದೆಹಲಿ, ಜ.13- ನೋಟು ನಿಷೇಧದ ಹೊರತಾಗಿ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದ ಬೆನ್ನಲ್ಲೆ ಭಾರತದ ಕೈಗಾರಿಕಾ ಉತ್ಪಾದನೆ ಶೇ.5.7ಕ್ಕೆ ಏರಿಕೆಯಾಗಿರುವುದು ವರದಿಯಾಗಿದೆ. 500, 1000ರೂ. ಮುಖಬೆಲೆಯ ನೋಟುಗಳ ಅಮಾನ್ಯದ ನಡುವೆಯೂ ಕೈಗಾರಿಕಾ ವಲಯದಲ್ಲಿ ಅಭಿವೃದ್ಧಿ ಪ್ರಮಾಣ ಏರಿಕೆಯಾಗಿರುವುದು ಪ್ರಕಟವಾಗಿದೆ. ಅಚ್ಚರಿ ಎಂದರೆ ನೋಟು ನಿಷೇಧದ ಬಳಿಕವೂ ಕೈಗಾರಿಕಾ ಉತ್ಪಾದನೆ ಕಳೆದ 13 ತಿಂಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡಿದ್ದು, ಶೇ.5.7ರಷ್ಟಾಗಿದೆ. ಇನ್ನು ಡಿಸೆಂಬರ್‍ನ ಸಗಡು ಹಣದುಬ್ಬರ ಸಹ 25 ತಿಂಗಳಲ್ಲಿ ಕಡಿಮೆ ದಾಖಲಾಗಿದ್ದು, ಆರ್‍ಬಿಐ ಫೆಬ್ರವರಿಯಲ್ಲಿ ಮಂಡಿಸಲಿರುವ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಹುಟ್ಟಿಸಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ನೋಟು ಅಮಾನ್ಯದ ನಿರ್ಧಾರ ಕೈಗಾರಿಕಾ ಉತ್ಪನ್ನದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರಿಲ್ಲ.
ಕೈಗಾರಿಕಾ ಉತ್ಪಾದನಾ ಡಾಟಾ ಸದ್ಯಕ್ಕೆ ಅಸ್ಥಿರವಾಗಿದ್ದು, ಪರಿಷ್ಕರಣೆಯ ಅಗತ್ಯವಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್‍ಗೂ ಮುನ್ನ ಕೈಗಾರಿಕಾ ಉತ್ಪಾದನಾ ದರ ಶೇ.34ರಷ್ಟಿತ್ತು. ಅಕ್ಟೋಬರ್‍ನಲ್ಲಿ 1.8ರಷ್ಟು ಕುಸಿದಿದ್ದ ಕೈಗಾರಿಕಾ ಉತ್ಪಾದನೆ ನವೆಂಬರ್‍ನಲ್ಲಿ ಶೇ.5.7ಕ್ಕೆ ಏರಿಕೆಯಾಗಿದೆ.

ಕೈಗಾರಿಕಾ ಉತ್ಪಾದನೆ ಮೇಲೆ ನೋಟು ನಿಷೇಧದ ಪರಿಣಾಮದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಕ್ಕೆ ಇದು ಸೂಕ್ತ ಸಮಯವಲ್ಲ. ಕೈಗಾರಿಕಾ ಉತ್ಪಾದನೆಯ ಮೇಲೆ ನೋಟು ಅಪನಗದೀಕರಣ ಪರಿಣಾಮವನ್ನು ಸಂಪೂರ್ಣವಾಗಿ ಅರಿಯಲು ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆದರೂ ಉತ್ಪಾದನೆ ವಲಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಗಾಧವಾದ ಬೆಳವಣಿಗೆ ದಾಖಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin