ನೋಟು ಅಮಾನೀಕರಣ ದೇಶದ ಆರ್ಥಿಕತೆಗೆ ಅಪ್ಪಳಿಸಿದ ಸುನಾಮಿ : ಎಂ.ಪಿ.ನಾಡಗೌಡ

ಈ ಸುದ್ದಿಯನ್ನು ಶೇರ್ ಮಾಡಿ

M-P-Nadagowda

ಬೆಂಗಳೂರು, ಅ.28- ನೋಟು ಅಮಾನೀಕರಣವು ದೇಶದ ಆರ್ಥಿಕತೆಗೆ ಅಪ್ಪಳಿಸಿದ ಸುನಾಮಿ ದುಸ್ವಪ್ನ ದಿನ ಎಂದು ಖಂಡಿಸಿರುವ ಜೆಡಿಯು(ಯು) ಇದರ ವಿರುದ್ಧ ನ.8ರಂದು ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.  500 ಮತ್ತು 1000 ರೂ.ನೋಟುಗಳ ನಿಷೇಧದಿಂದಾಗಿ ದೇಶದಲ್ಲೇ ಕಪ್ಪು ಹಣ, ಭಯೋತ್ಪಾದನೆ, ಖೋಟನೋಟಿನ ಹಾವಳಿ ಯಾವುದು ನಿಯಂತ್ರಣವಾಗಿಲ್ಲ. ಬದಲಿಗೆ ಸಾಮಾನ್ಯ ಜನರು ಸಂಕಷಟಕ್ಕೆ ಸಿಲುಕುವಂತಾಗಿದೆ. ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ ಎಂದು ಖ್ಯಾತಿ ಗಳಿಸಿದ್ದ ದೇಶದ ಆರ್ಥಿಕತೆ ಹಳ್ಳ ಹಿಡಿದಿದ್ದು, ಜಿಡಿಪಿ ದರ 7.5%ರಿಂದ 5.7ರಷ್ಟು ತೀವ್ರ ಕುಸಿತ ಕಂಡಿದೆ. ನೋಟು ಅಮಾನೀಕರಣ, ಜಿಎಸ್‍ಟಿ ಜಾರಿಯಿಂದ ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಇದರ ವಿರುದ್ಧ ನ.8ರಂದು ಪ್ರತಿಭಟನೆ ಹಮ್ಮಿಕೊಂಡಿದೆ.

Facebook Comments

Sri Raghav

Admin