ನೋಟು ಬ್ಯಾನ್ ನಿಂದ 15 ಲಕ್ಷ ಉದ್ಯೋಗ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

note-ban

ನವದೆಹಲಿ, ಜು.20-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಳೆದ ವರ್ಷ ನವೆಂಬರ್ 8ರಿಂದ ಜಾರಿಗೊಳಿಸಿದ ಹಳೆ ನೋಟು ರದ್ದತಿಯಿಂದಾಗಿ ಈವರೆಗೆ 15 ಲಕ್ಷ ಉದ್ಯೋಗ ನಷ್ಟವಾಗಿದೆ.  ನೋಟು ಅಮಾನ್ಯೀಕರಣದ ನಂತರ ಆರಂಭವಾದ ಉದ್ಯೋಗ ನಷ್ಟ ವಿದ್ಯಮಾನವು ಇನ್ನೂ ಮುಂದುವರಿದಿದ್ದು, ಹೊಸ ನೇಮಕಾತಿಗೆ ಸದ್ಯಕ್ಕೆ ಅವಕಾಶ ಇಲ್ಲದಿರುವುದರಿಂದ ಆರ್ಥಿಕ ಮಾರುಕಟ್ಟೆ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಸಮೀಕ್ಷೆ ಪ್ರಕಾರ, ದೇಶದಲ್ಲಿ 2016ರ ಏಪ್ರಿಲ್ ವೇಳೆಗೆ ಇದ್ದ ಉದ್ಯೋಗಿಗಳ ಸಂಖ್ಯೆ 40.1 ಕೋಟಿಯಿಂದ ಅದೇ ವರ್ಷ ಡಿಸೆಂಬರ್ ವೇಳೆಗೆ 40.65 ಕೋಟಿಗೆ ಹೆಚ್ಚಾಗಿತ್ತು. ಆದರೆ ಈ ವರ್ಷದ ಜನವರಿಯಿಂದ ಏಪ್ರಿಲ್‍ವರೆಗಿನ ಅವಧಿಯಲ್ಲಿ ಉದ್ಯೋಗಿಗಳ ಒಟ್ಟು ಸಂಖ್ಯೆ 40.5 ಕೋಟಿಗೆ ಇಳಿದಿದೆ.
ಭಾರತದ ಉತ್ಪಾದನಾ ವಲಯ ಇನ್ನೂ ಸಮರ್ಪಕವಾಗಿ ಪುನಶ್ಚೇತನಗೊಳ್ಳದ ಕಾರಣ ಉದ್ಯಮರಂಗದಲ್ಲಿ ಹೊಸ ನೇಮಕಾತಿ ನಡೆಯುತ್ತಿಲ್ಲ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟಗಳ ಮಹಾಮಂಡಳಿ (ಎಫ್‍ಐಸಿಸಿಐ) ನಡೆಸಿದ ಇನ್ನೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಮುಂದಿನ ಮೂರು ತಿಂಗಳ ಕಾಲ ಯಾವುದೇ ಹೆಚ್ಚುವರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದಿರಲು ಶೇ.73ರಷ್ಟು ಉದ್ದಿಮೆಗಳು ನಿರ್ಧರಿಸಿವೆ ಎಂದು ತ್ರೈಮಾಸಿಕ ಸಮೀಕ್ಷೆ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin