ನೋಟು ರದ್ಧತಿ  ಹಿನ್ನೆಲೆ : ದೇವಾಲಯಗಳ ಆದಾಯ ಖೋತಾ 

ಈ ಸುದ್ದಿಯನ್ನು ಶೇರ್ ಮಾಡಿ

god
ಬೆಂಗಳೂರು, ಫೆ.19-ನೋಟು ಅಪನಗದೀಕರಣದ ಹಿನ್ನೆಲೆಯಲ್ಲಿ ರಾಜ್ಯದ ದೇವಾಲಯಗಳ ಆದಾಯ ಖೋತಾ ಆಗಿದೆ.1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಆರಂಭದಲ್ಲಿ ದೇವಾಲಯಗಳ ಆದಾಯ ಸ್ವಲ್ಪ ಹೆಚ್ಚಾಗಿತ್ತು, ನಂತರ ಕುಸಿಯುತ್ತಾ ಬಂದಿದೆ. ಈಗ ಸಂಪೂರ್ಣ ಕುಸಿಯುತ್ತಾ ಬಂದಿದೆ.
ತಿರುಪತಿ-ತಿರುಮಲದ ಆದಾಯದಲ್ಲೂ ಕುಸಿತ ಉಂಟಾಗಿದೆ. ಜೊತೆಗೆ ರಾಜ್ಯದ ದೇವಾಲಯಗಳ ಹುಂಡಿಗೂ ಕಾಸು ಬರುತ್ತಿಲ್ಲ. ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ, ಕೊಪ್ಪಳ ತಾಲೂಕಿನ ಹುಲಿಗಮ್ಮದೇವಿ, ಕನಕಗಿರಿ ಕನಕಾಚಲಪತಿ ದೇವಾಲಯಗಳ ಆದಾಯ ಇಳಿಮುಖವಾಗಿದೆ ಎಂದು ದೇವಸ್ಥಾನಗಳ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಲೈಮಹದೇಶ್ವರ ದೇವಾಲಯದ ಆದಾಯ ಡಿಸೆಂಬರ್ ತಿಂಗಳಲ್ಲಿ 1.23 ಕೋಟಿ ರೂ.ರಷ್ಟಿತ್ತು. ಜನವರಿಯಲ್ಲಿ 1.03 ಕೋಟಿಗೆ ಇಳಿಮುಖವಾಗಿದೆ. ಹುಲಿಗಮ್ಮದೇವಿ ದೇವಾಲಯದ ಆದಾಯ ಕಳೆದೆರಡು ತಿಂಗಳಲ್ಲಿ 27 ಲಕ್ಷ ರೂ. ಇಳಿಕೆಯಾಗಿದೆ.ಕನಕ ಚಲಪತಿ ದೇವಸ್ಥಾನದ ಆದಾಯದಲ್ಲೂ 1.44 ಲಕ್ಷ ರೂ. ಇಳಿಮುಖವಾಗಿದೆ. ಇದೇ ರೀತಿ ರಾಜ್ಯದ ಹಲವು ದೇವಾಲಯಗಳ ಮೇಲೆ ನೋಟ್ ಬ್ಯಾನ್ ಎಫೆಕ್ಟ್ ಪರಿಣಾಮ ಬೀರಿದೆ. ಭಕ್ತರಲ್ಲಿ ಧಾರಾಳತೆ ಕಡಿಮೆಯಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin