ನೋಟ್ ಬ್ಯಾನ್’ನಿಂದ ರದ್ಧತಿಯಿಂದ ರಾಜ್ಯಸರ್ಕಾರದ ಖಜಾನೆಗೆ ಭಾರೀ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Demonetization Notes

ಬೆಳಗಾವಿ, ನ.23- ನೋಟು ರದ್ಧತಿಯಿಂದ ರಾಜ್ಯಸರ್ಕಾರಕ್ಕೆ 7 ರಿಂದ 8 ಸಾವಿರ ಕೋಟಿ ಆದಾಯ ನಷ್ಟವಾಗಿದೆ. ಕೇಂದ್ರ ಸರ್ಕಾರ ನ.8 ರಂದು ರಾತ್ರಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿ ಸಿದ ನಂತರ ರಾಜ್ಯದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಂತಾಗಿವೆ.  ತೆರಿಗೆ ಸಂಗ್ರಹ, ವ್ಯಾಪಾರ ವಹಿವಾಟುಗಳಿಂದಾಗಿ ಸುಮಾರು 3 ರಿಂದ 5 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಸಹಕಾರಿ ಇಲಾಖೆ ವ್ಯಾಪ್ತಿಯಲ್ಲಿ ಬ್ಯಾಂಕ್‍ಗಳಲ್ಲಿ ಹಳೇ ನೋಟುಗಳ ಬದಲಾವಣೆ ಹಾಗೂ ಸ್ವೀಕೃತಿಗೆ ಅವಕಾಶ ನೀಡದೆ ಇರುವುದರಿಂದ ಮಾರುಕಟ್ಟೆ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಸಾಲ ವಸೂಲಾತಿ ಪ್ರಮಾಣ ಕುಸಿದಿದೆ. ಇದರಿಂದಾಗಿ 2 ಸಾವಿರ ಕೋಟಿಯಷ್ಟು ಹೊರೆಯಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ನೋಟುಗಳ ನಿಷೇಧ ಮಾಡಿದ ಕೇಂದ್ರಸರ್ಕಾರ ಅಗತ್ಯ ಪರ್ಯಾಯ ಕ್ರಮತೆಗೆದುಕೊಳ್ಳದೆ ಇರುವುದರಿಂದ ರಾಜ್ಯಸರ್ಕಾರ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಾಯಾವಕಾಶ ಬೇಕಾಗಿರುವುದರಿಂದ ಆವರೆಗೂ ಆರ್ಥಿಕ ನೆರವು ನೀಡುವಂತೆ ರಾಜ್ಯಸರ್ಕಾರ ಕೇಂದ್ರದ ಮೊರೆ ಹೋಗಲು ಚಿಂತನೆ ನಡೆಸಿದೆ. ಜನಸಾಮಾನ್ಯರು, ಕೈಗಾರಿಕೆಗಳು, ವ್ಯಾಪಾರವಹಿವಾಟುಗಳು ನಷ್ಟ ಅನುಭವಿಸುವಷ್ಟೇ ಪ್ರಮಾಣದಲ್ಲಿ ರಾಜ್ಯಸರ್ಕಾರ ಕೂಡ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :

ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್  

Click Here to Download 

Facebook Comments

Sri Raghav

Admin