ನೋಟ್ ಬ್ಯಾನ್ ಆಗುವ ಮೊದಲು ನಡೆದ ವ್ಯವಹಾರಗಳ ಬಗ್ಗೆಯೂ ಮಾಹಿತಿ ನೀಡುವಂತೆ ಬ್ಯಾಂಕ್‍ಗಳಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

DCC-Bank-014
ನವದೆಹಲಿ, ಜ.8-ನೋಟು ರದ್ದುಗೊಳಿಸುವುದಕ್ಕೆ ಮುನ್ನ ಹಿಂದಿನ ಅವಧಿಯಲ್ಲಿನ ಬ್ಯಾಂಕಿಂಗ್ ವ್ಯವಹಾರಗಳ ವಿಶ್ಲೇಷಣೆ ಮಾಡಲು ಬಯಸಿರುವ ಆದಾಯ ತೆರಿಗೆ ಇಲಾಖೆ ಏಪ್ರಿಲ್ 1 ರಿಂದ ನ.9ರವರೆಗೆ ಉಳಿತಾಯ ಖಾತೆಗಳಲ್ಲಿನ ನಗದು ಠೇವಣಿಗಳ ಬಗ್ಗೆ ವರದಿ ನೀಡುವಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಿದೆ.  ಬ್ಯಾಂಕ್ ಖಾತೆಗಳನ್ನು ತೆರೆಯುವ ಸಮಯದಲ್ಲಿ ಪ್ಯಾನ್ ಕಾರ್ಡ್ ಮತ್ತು ಫಾರಂ-60 ಸಲ್ಲಿಸದಿರುವ ಖಾತೆದಾರರಿಗೆ ಈ ವರ್ಷ ಫೆ.28ರವರೆಗೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸುವಂತೆಯೂ ಬ್ಯಾಂಕ್‍ಗಳಿಗೆ ಐಟಿ ನಿರ್ದೇಶನ ನೀಡಿದೆ.

ಸೂಚನೆ ಪ್ರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳು, ಸಹಕಾರಿ ಬ್ಯಾಂಕ್‍ಗಳು ಹಾಗೂ ಅಂಚೆ ಕಚೇರಿಗಳು ಏ.1 ರಿಂದ ನ.9ರ ನಡುವೆ ಎಲ್ಲಾ ನಗದು ಠೇವಣಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ವರದಿ ಮಾಡಬೇಕಾಗುತ್ತದೆ.  ದೇಶದ ವಿವಿಧ ಬ್ಯಾಂಕ್‍ಗಳಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲಾ ಸಹಕಾರಿ ಬ್ಯಾಂಕ್‍ಗಳಲ್ಲಿ ಕೇವಲ ನಾಲ್ಕೈದು ದಿನಗಳಲ್ಲೇ ಭಾರೀ ಮೊತ್ತದ ಅಕ್ರಮ ಠೇವಣಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ಸೂಚನೆ ನೀಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin