ನೋಟ್ ಬ್ಯಾನ್ ಎಫೆಕ್ಟ್ : ಶಸ್ತ್ರಾಸ್ತ್ರಗಳೊಂದಿಗೆ 564 ಮಾವೋವಾದಿಗಳ ಶರಣಾಗತಿ

ಈ ಸುದ್ದಿಯನ್ನು ಶೇರ್ ಮಾಡಿ

Nuxulites-01

ನವದೆಹಲಿ, ನ.29-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನೋಟು ರದ್ಧತಿ ಕ್ರಮದಿಂದಾಗಿ ಕಳೆದ 28 ದಿನಗಳ ಅವಧಿಯಲ್ಲಿ 564 ಮಾವೋವಾದಿಗಳು ಮತ್ತು ಅವರ ಬಗ್ಗೆ ಅನುಕಂಪವುಳ್ಳವರು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗತರಾಗಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.  ನಕ್ಸಲರ ಹಾವಳಿ ಇರುವ ಛತ್ತೀಸಗಢ, ಒಡಿಶಾ, ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನವೆಂಬರ್ 18ರಿಂದ ಈವರೆಗೆ 469 ಮಾವೋವಾದಿಗಳು ಮತ್ತು ಅವರ ಬೆಂಬಲಿಗರು ಶರಣಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಅಂಕಿ-ಅಂಶ ನೀಡಿದೆ.

ಕಳೆದ ತಿಂಗಳ ಆಂಧ್ರಪ್ರದೇಶದ ಗ್ರೇಹೌಂಡ್ಸ್ ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 23 ಮಾವೋವಾದಿಗಳು ಹತರಾದ ಒಡಿಶಾದ ಮಾಲ್ಕನ್‍ಗಿರಿ ಜಿಲ್ಲೆಯಿಂದ ಅತಿ ಹೆಚ್ಚು ಶರಣಾಗತಿ ಪ್ರಕರಣ (ಶೇ.70) ವರದಿಯಾಗಿದೆ.  2011ರಿಂದ ಈ ವರ್ಷದ ನವೆಂಬರ್ 15ರವರೆಗೆ ಒಟ್ಟು 3,766 ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. 2016ರಲ್ಲೇ ಒಟ್ಟು 1,399 ನಕ್ಸಲರು ಶರಣಾಗಿದ್ದು, ಈ ಸಂಖ್ಯೆ ಕಳೆದ ಆರು ವರ್ಷಗಳಲ್ಲೇ ಅತ್ಯಧಿಕವಾಗಿದೆ.  ಕೇಂದ್ರ ಸರ್ಕಾರವು 500 ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸಿದ ನಂತರ ನಕ್ಸಲೀಯರು ಮತ್ತು ಮಾವೋವಾದಿ ಉಗ್ರರ ಅಸ್ತಿತ್ವವೇ ಬುಡಮೇಲಾಗಿದ್ದು, ಬದುಕುಳಿಯಲು ಹೆಣಗುತ್ತಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಹಿಂದಷ್ಟೇ ಹೈದರಾಬಾದ್‍ನಲ್ಲಿ ನಡೆದ ಪೊಲೀಸ್ ಮಹಾನಿರ್ದೇಶಕರ ಸಮಾವೇಶದಲ್ಲಿ ಹೇಳಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin