ನೋಟ್ ಬ್ಯಾನ್ ನಂತರ 25 ಲಕ್ಷ ರೂ. ಠೇವಣಿ ಮಾಡಿದ 1.16 ಲಕ್ಷ ಮಂದಿಗೆ ಐಟಿ ನೋಟಿಸ್
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ನ.28-ನೋಟು ಅಮಾನ್ಯೀಕರಣಗೊಂಡ ನಂತರ ಬ್ಯಾಂಕ್ ಖಾತೆಗಳಲ್ಲಿ 25 ಲಕ್ಷ ರೂ.ಗಳಿಗೂ ಹೆಚ್ಚು ಹಣ ಠೇವಣಿ ಇಟ್ಟಿರುವ 1.16 ಲಕ್ಷ ಮಂದಿ ಮತ್ತು ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ಗಳನ್ನು ಜಾರಿಗೊಳಿಸಿದೆ. ನಿಗದಿತ ದಿನಾಂಕಗಳ ಒಳಗೆ ಆದಾಯ ವಿವರಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಹೇಳಿದ್ದಾರೆ.
ಐಟಿ ರಿಟನ್ಸ್ ಸಲ್ಲಿಸಲು ವಿಫಲವಾಗಿರುವ ಭಾರೀ ನಗದನ್ನು ಠೇವಣಿಯಾಗಿ ಇಟ್ಟಿರುವ ಮಂದಿಯ ಬಗ್ಗೆಯೂ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Facebook Comments