ನೋಟ್ ಬ್ಯಾನ್ ನಂತರ 70,000 ಕೋಟಿ ರೂ. ಮೌಲ್ಯದ ಕಾಳ ಧನ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

black-money-1

ಕಟಕ್ (ಒಡಿಶಾ), ಮಾ. 3-ನೋಟು ಅಮಾನ್ಯಗೊಂದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ 70,000 ಕೋಟಿ ರೂ. ಮೌಲ್ಯದ ಕಾಳ ಧನ ಪತ್ತೆಯಾಗಿದೆ ಎಂದು ಕಪ್ಪು ಹಣ ನಿಗ್ರಹಕ್ಕಾಗಿ ಸುಪ್ರೀಂಕೋರ್ಟ್‍ನಿಂದ ನೇಮಕಗೊಂಡ ವಿಶೇಷ ತನಿಖಾ ತಂಡದ(ಎಸ್‍ಐಟಿ) ಉಪಾಧ್ಯಕ್ಷ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ತಿಳಿಸಿದ್ದಾರೆ.
ಈ ಸಂಬಂಧ ಏಪ್ರಿಲ್‍ನಲ್ಲಿ ಸುಪ್ರೀಂಕೋರ್ಟ್‍ಗೆ ಆರನೇ ಮಧ್ಯಂತರ ವರದಿ ಸಲ್ಲಿಕೆಯಾಗಲಿದ್ದು, ಕಾಳಧನದ ಬಗ್ಗೆ ಅಂಕಿ-ಅಂಶಗಳ ವಿವರಗಳನ್ನು ಒದಗಿಸಲಾಗುತ್ತದೆ.   ವಿದೇಶಗಳಲ್ಲಿ ಹಣ ಹೂಡಿರುವ ಭಾರತೀಯರ ಜಾಗತಿಕ ವ್ಯವಹಾರಗಳ ಕುರಿತು ತನಿಖೆ ನಡೆಸಿದ ನಂತರ 16,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವು ಕಾಳ ಧನ ವಹಿವಾಟು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಟಕ್‍ನಲ್ಲಿ ಆರ್ಥಿಕ ಮತ್ತು ಹಣಕಾಸು ವ್ಯವಹಾರಗಳೊಂದಿಗೆ ವ್ಯವಹರಿಸುವ ಹಲವಾರು ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್‍ಗೆ ತನ್ನ ಆರನೇ ಮಧ್ಯಂತರ ವರದಿಯನ್ನು ಎಸ್‍ಐಟಿ ಸಲ್ಲಿಸಲಿದೆ ಎಂದು ಮಾಹಿತಿ ನೀಡಿದರು.   ಕಾಳಧನ ನಿಗ್ರಹಕ್ಕಾಗಿ ಕಳೆದ ಎರಡು ವರ್ಷಗಳಿಂದ ಎಸ್‍ಐಟಿ ಹಲವಾರು ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಬಹುತೇಕ ಸಲಹೆಗಳನ್ನು ಸರ್ಕಾರ ಸ್ವೀಕರಿಸಿದೆ ಇನ್ನು ಕೆಲವು ಶಿಫಾರಸುಗಳು ಪರಿಶೀಲನೆಯಲ್ಲಿವೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin