ನೋಟ್ ಬ್ಯಾನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್.ಪೇಟೆ, ಫೆ.24- ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಮಿನಿವಿಧಾನ ಸೌಧದ ಎದುರು ಮೋದಿ ಅವರ ನೋಟ್ ಬ್ಯಾನ್ ವಿರೋಧಿಸಿ ಜನವೇದನ ಪ್ರತಿಭಟನಾ ಕಾರ್ಯಕ್ರಮ ನಡೆಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಏಕಾಏಕಿ ನೋಟ್ ಮಾಡಿದ್ದರಿಂದ ದೇಶದಲ್ಲಿ ಜನಸಾಮಾನ್ಯರು ಬ್ಯಾಂಕುಗಳ ಮುಂದೆ ಸರತಿ ಸಾನಿನಲ್ಲಿ ನಿಲ್ಲುವಂತಾಯಿತು. ನೋಟ್ ರದ್ದು ಮಾಡಿದ್ದರಿಂದ ದೇಶದಲ್ಲಿ ಏನೋ ಬದಲಾವಣೆ ಮಾಡುತ್ತೇವೆಂದು ಪ್ರಧಾನಿಗಳು ಹೇಳಿದ್ದರು ಆದರೆ ಯಾವುದೇ ಬದಲಾವಣೆಯಾಗಲಿಲ್ಲ ಸುಮ್ಮನೆ ಜನಸಾಮಾನ್ಯರಿಗೆ ತೊಂದರೆಯಾಯಿತು ಇಂತಹ ಆಡಳಿತ ನಮಗೆ ಬೇಕೆ? ಎಂದು ಪ್ರಶ್ನಿಸಿದರು.ಮೋದಿ ಅವರು ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಅಧಿಕಾರ ನೀಡಿದಲ್ಲಿ ಕಪ್ಪು ಹಣ ಹೊರತರುವುದಾಗಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷಗಳು ತುಂಬುತ್ತಾ ಬಂದರೂ ಕಪ್ಪು ಹಣ ಹೊರತರಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆ.ಯು.ಐ.ಡಿ.ಎಫ್.ಸಿ) ನಿಗಮದ ರಾಜ್ಯಾಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಕಾರ್ಯಕರ್ತರು ತಿಳಿಸಿಕೊಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ತಾ.ಪಂ.ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಮಾಂಗದ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಚೇತನ್‍ಕುಮಾರ್, ಮುಖಂಡರಾದ ಬಸ್ತಿರಂಗಪ್ಪ, ಕಟ್ಟೆಕ್ಯಾತನಹಳ್ಳಿ ಕೆ.ಟಿ.ಚಂದ್ರೇಗೌಡ, ಮಡುವಿನಕೋಡಿ ಗೌಸ್‍ಖಾನ್, ಪುರಸಭಾ ಸದಸ್ಯರಾದ ಹೆಚ್.ಕೆ.ಅಶೋಕ್, ಕೆ.ಟಿ.ಚಕ್ರಪಾಣಿ, ಕೆ.ಗೌಸ್‍ಖಾನ್, ಪಿಎಲ್‍ಡಿಬ್ಯಾಂಕ್ ನಿರ್ದೇಶಕ ಬೊಮ್ಮೇಗೌಡನಕೊಪ್ಪಲು ಜಯರಾಮು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin