ನೋಟ್ ಬ್ಯಾನ್ ಹಗರಣದಿಂದ ಮೋದಿ ನರ್ವಸ್ ಆಗಿದ್ದಾರೆ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi-01

ನವದೆಹಲಿ, ಡಿ.13-ನೋಟು ರದ್ಧತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಅವರು, ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ. ನೋಟು ರದ್ಧತಿ ನಂತರ ದೇಶದಲ್ಲಿ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯಿಂದ ಮೋದಿಯವರಲ್ಲಿ ನಡುಕ ಶುರುವಾಗಿದೆ ಎಂದು ಟೀಕಿಸಿದರು. ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೆ ಕೇಂದ್ರ ಸರ್ಕಾರ ಬಣ್ಣ ಬಯಲು ಮಾಡುತ್ತೇನೆ ಎಂದು ಪುನರುಚ್ಚರಿಸಿದರು.

ಚಿದಂಬರಂ ಟೀಕೆ:

ಮುಂಬೈನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸಹ ಇದೊಂದು ಅತಿ ದೊಡ್ಡ ಹಗರಣ ಎಂದು ಟೀಕಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ನಮ್ಮ ಬೆಂಬಲ ಇದೆ. ಆದರೆ ದಿನ ಬೆಳಗಾಗುವುದರ ಒಳಗೆ ಕ್ಯಾಷ್‍ಲೆಸ್ ಭಾರತ ಮಾಡಲು ಸಾಧ್ಯವಿಲ್ಲ ಎಂದರು. ನೋಟು ನಿಷೇಧವು ಬಡವರ ಮೇಲೆ ನಡೆದ ಗದಾಪ್ರಹಾರ ಎಂದು ಅವರು ಬಣ್ಣಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin