ನೋಡಿ ರಣವೀರ್ ಸಿಂಗ್ ನ ಈ ಹೊಸ ಅವತಾರ

ಈ ಸುದ್ದಿಯನ್ನು ಶೇರ್ ಮಾಡಿ

rANAVEER-SINGHಬಾಲಿವುಡ್ನ ಬಹು ಬೇಡಿಕೆಯ ನಟ ರಣವೀರ್ಸಿಂಗ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ. ಈತ ತಾಯಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾನೆ. ಈ( ಪಾತ್ರ ಮಾಡಿರುವುದು ಸಿನಿಮಾದಲ್ಲಿ ಅಲ್ಲ, ಜಾಹೀರಾತೊಂದರಲ್ಲಿ..!  ‘ರಣವೀರ್ ಚಿಂಗ್ ರಿಟರ್ನ್ಸ್’ ಎಂಬ ಆರು ನಿಮಿಷಗಳ ಆಡ್ ಫಿಲ್ಮ್ನಲ್ಲಿ ರಣವೀರ್ ಗೃಹಿಣಿ (ತಾಯಿ) ಪಾತ್ರದಲ್ಲಿ ಮಿಂಚಿದ್ದಾನೆ. ಇದು ಇಂಡೋ-ಚೀನಿ ಫುಡ್ ಕುರಿತ ಜಾಹೀರಾತು. ಆದರೂ ಹಾಲಿವುಡ್ ಫಿಲ್ಮ್ ರೇಂಜಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಆಡ್ ಫಿಲ್ಮ್ಅನ್ನು ಪರಿಣಾಮಕಾರಿಯಾಗಿ ಸೃಷ್ಟಿಸಿದ್ದಾರೆ.  ಈ ಜಾಹೀರಾತಿನಲ್ಲಿ ‘ಮ್ಯಾಡ್ಮ್ಯಾಕ್ಸ್’ ಚಿತ್ರದ ಪಾತ್ರಧಾರಿಯಾಗಿ ಗ್ರ್ಯಾಂಡ್ ಎಂಟ್ರಿ ನೀಡುವ ರಣವೀರ್, ರಣರಂಗದಲ್ಲಿ ಶತ್ರುಗಳನ್ನು ಸದೆ ಬಡಿದು ಕನ್ಯೆಯೊಬ್ಬಳ (ತಮನ್ನಾ ಬಾಟಿಯಾ) ಮನ ಗೆಲ್ಲುತ್ತಾನೆ. ನಂತರ ಹಾಡಿನಲ್ಲಿ ಕಾಣಿಸಿಕೊಂಡು ಜಾಹೀರಾತಿನಲ್ಲಿರುವ ಫುಡ್ನ ಗುಣಗಾನ ಮಾಡುತ್ತಾನೆ.

ಇನ್ನೊಂದು ಗೀತೆಯಲ್ಲಿ ತಮನ್ನಾ ಜೊತೆ ರೊಮ್ಯಾನ್ಸ್. ಜಾಹೀರಾತಿನ ಕೊನೆ ಭಾಗದಲ್ಲಿ ಪಂಜಾಬಿ ಗೃಹಿಣಿ (ತಾಯಿ) ಆಗಿ ಆಹಾರದ ಮಹತ್ವವನ್ನು ಸಾರುತ್ತಾನೆ (ಳೆ). ನನಗೆ ಮೊದಲಿನಿಂದಲೂ ತಾಯಿ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಅದು ಈಗ ಭಾರತ ಮತ್ತು ಚೀನಾದಲ್ಲಿ ಜನಪ್ರಿಯವಾಗಿರುವ ನೂಡಲ್ಸ್ ಕುರಿತ ‘ರಣವೀರ್ ಚಿಂಗ್ ರಿಟರ್ನ್ಸ್’ ಜಾಹೀರಾತು ಮೂಲಕ ಈಡೇರಿದೆ ಎಂದು ಖುಷಿಪಟ್ಟಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin