ನೋವಿನಿನಿಂದ ಕೊರಗಿ ಕೊರಗಿ ಕೊನೆಗೆ ಪ್ರಾಣ ಬಿಟ್ಟ ಸಿದ್ದ

ಈ ಸುದ್ದಿಯನ್ನು ಶೇರ್ ಮಾಡಿ

Sidda-Elephant

ರಾಮನಗರ, ಡಿ.9– ಮಂಚನಬೆಲೆ ಬಳಿ ಕಾಲು ಮುರಿದುಕೊಂಡು ಅಸ್ವಸ್ಥನಾಗಿದ್ದ ಕಾಡಾನೆ ಸಿದ್ದ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಕಾಡಾನೆ ಸಿದ್ದನಿಗೆ ಮಂಚನಬೆಲೆ ಜಲಾಶಯದ ಹಿನ್ನೀರು ಸಮೀಪದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾರತೀಯ ಯೋಧರು ಸಿದ್ದನ ಜೀವ ಉಳಿಸಲು ಗ್ಯಾಂಟ್ರಿಟವರ್ ಕೂಡ ನಿರ್ಮಾಣ ಮಾಡಿದ್ದರು. ವನ್ಯಜೀವಿ ತಜ್ಞರ ತಂಡ ಮಂಚನಬೆಲೆಯಲ್ಲಿ ಬೀಡು ಬಿಟ್ಟು ಚಿಕಿತ್ಸೆ ನೀಡುತ್ತಿದ್ದರು.

ಸೇವ್ ಸಿದ್ದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿತ್ತು. ಸಚಿವರು, ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು, ಸೆಲಬ್ರಿಟಿಗಳು ಸಿದ್ದ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಗುಣಮುಖನಾಗಲೆಂದು ಹಾರೈಸಿದ್ದರು.   ಹೊರರಾಜ್ಯಗಳಿಂದ ವೈದ್ಯರ ತಂಡ ಆಗಮಿಸಿ ಸಿದ್ದನ ಜೀವ ಉಳಿಸಲು ಅವಿರತವಾಗಿ ಶ್ರಮಿಸಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಸಿದ್ದ ಕಳೆದ ಒಂದು ವಾರದಿಂದ ಸಾಕಷ್ಟು ಸೊರಗಿ ಹೋಗಿತ್ತು. ಆದರೂ ಸಿದ್ದನ ಜೀವ ಉಳಿಯಬಹುದೆಂದು ವೈದ್ಯರ ತಂಡ ಆಶಾಭಾವನೆಯಿಂದ ಚಿಕಿತ್ಸೆಯನ್ನು ಮುಂದುವರಿಸಿತ್ತು. ಬಹುದಿನಗಳ ಚಿಕಿತ್ಸೆ ಫಲಕಾರಿಯಾಗದೆ ಸಿದ್ದ ಅಸ್ತಂಗತನಾಗಿದ್ದಾನೆ. ಸಿದ್ದ ಉಳಿಯಲಿ ಎಂದು ಹೋಮ-ಹವನ, ವಿಶೇಷ ಪೂಜೆಗಳನ್ನು ಕೂಡ ಮಾಡಲಾಗಿತ್ತು. ಯಾವುದೂ ಫಲಿಸಲಿಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin