ನೋವು ನುಂಗಿಕೊಂಡು ಕಾಂಗ್ರೆಸ್‍ ಪಕ್ಷದಲ್ಲೇ ಎಸ್.ಎಂ.ಕೃಷ್ಣ  ಮುಂದುವರೆಯಲಿ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DKS-SMK

ಬೆಂಗಳೂರು, ಫೆ.3- ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ನೋವು ನುಂಗಿಕೊಂಡು ಪಕ್ಷದಲ್ಲೇ ಮುಂದುವರೆಯಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇಲಾಖೆಯ ಬಗ್ಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರ ಜತೆ ನಾನು ಮಾತನಾಡಲು ಕಾಲ ಪಕ್ವವಾಗಿಲ್ಲ. ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಶಾಕ್ ನೀಡಿದೆ ಹಾಗೂ ಆಶ್ಚರ್ಯವಾಗಿದೆ. ನಾನು ಈ ಶಾಕ್‍ನಿಂದ ಹೊರ ಬಂದಿಲ್ಲ ಎಂದರು.  ಕೃಷ್ಣ ಅವರು ಕಾಂಗ್ರೆಸ್‍ನಲ್ಲೇ ಮುಂದುವರೆಯಬೇಕೆಂಬುದು ನಮ್ಮೆಲ್ಲರ ಬಯಕೆ.

ಕೃಷ್ಣ ಅವರ ನಿರ್ಗಮನಕ್ಕೆ ಕಾಂಗ್ರೆಸ್‍ನ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ನನಗಿನ್ನೂ ಆಶಾಭಾವನೆಯಿದೆ. ಅವರು ಕಾಂಗ್ರೆಸ್‍ನಲ್ಲಿ ಮುಂದುವರೆಯಲಿ ಎಂದು ಪಾರ್ಥಿಸುತ್ತೇನೆ ಎಂದರು. ಮಂಡ್ಯದ ಕೆಲ ಕಾರ್ಯಕರ್ತರು ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಕಾರ್ಯಕರ್ತರು ಅೀರರಾಗುವ ಅಗತ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದೇನೆ. ಕಾಂಗ್ರೆಸ್ ಧ್ವಜ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿರುವುದನ್ನು ಬಿಡಬೇಡಿ ಎಂದ ಅವರು, ಮಂಡ್ಯದ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದರು .

ಇನ್ನ ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಎಚ್.ಡಿ.ಕುಮಾರಸ್ವಾಮಿಯವರು ಹೇಳಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಪಸ್ವಲ್ಪ ಭವಿಷ್ಯ ಹೇಳಲು ಕಲಿತಿರಬಹುದು. ಹಾಗಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದ ಅವರು, ಅಂತಹ, ಹೇಳಿಕೆ ನಂತರ ಅವರು ಪಲಾಯ ವಾದ ಅನುಸರಿಸುವುದು ಸಾಮಾನ್ಯ. ಒಂದು ವೇಳೆ ಸರ್ಕಾರ ಪತನವಾಗಲಿದೆ ಎಂದು ದೇವೇಗೌಡರು ಹೇಳಿದ್ದರೇ ಗಂಭೀರವಾಗಿ ಪರಿಗಣಿಸಬಹುದು. ಆದರೂ ಜೆಡಿಎಸ್‍ಗೆ 40, ಬಿಜೆಪಿ 40ಜನ ಶಾಸಕರಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರದು ಮಡಕೆಯ ಸರ್ಕಾರವಲ್ಲ. ಅದನ್ನು ಒಡೆದು ಹಾಕಲು ಸಾಧ್ಯವಿಲ್ಲ. ಇದು ಕಂಚಿನ ಸರ್ಕಾರ ಹುಣಸೇ ಹಣ್ಣು ಹಾಕಿ ಉಜ್ಜಿದಷ್ಟು ಹೊಳೆಪು ಬರುತ್ತದೆ. ಬದಲಿಗೆ ಇನ್ನೂ ಪ್ರಕಾಶಮಾನವಾಗಲಿದೆ ಎಂದು ತಿರುಗೇಟು ನೀಡಿದರು. ಎಸ್.ಎಂ.ಕೃಷ್ಣ ಅವರನ್ನು ಸರಿಯಾಗಿ ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂಬ ಬಗ್ಗೆ ಬಿಜೆಪಿ, ಜೆಡಿಎಸ್ ಟೀಕಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಿಜೆಪಿ ಯವರು ಅಡ್ವಾಣಿ, ಮುರಳಿ ಮನೋಹರ್‍ಯವರನ್ನು ಜೋಷಿ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ನೆನಪಿಸಿ ಕೊಳ್ಳಲಿ.

 

ನಾನು ಆಂತರಿಕ ಬೆಳವಣಿಗೆ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.

ಕೆಎಂಎಫ್ ಅಧ್ಯಕ್ಷರ ಬದಲಾವಣೆ: ಕೆಎಂಎಫ್ ಅಧ್ಯಕ್ಷ ನಾಗರಾಜ್ ಅವರ ಜತೆ ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಬೆಂಗಳೂರಿಗೆ ಬಂದು ಭೇಟಿಯಾಗಲು ಸೂಚಿಸಿದ್ದೆನೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರವೀಂದ್ರ ಅವರಿಗೆ ಅವಕಾಶ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದರು. ಫೆ.4ರಂದು ಕೆಎಂಎಫ್ ಆಡಳಿತ ಮಂಡಳಿ ಸಭೆಯನ್ನು ಸಹಕಾರ ಸಚಿವರು ಕರೆದಿದ್ದರು. ದೃರದೃಷ್ಟವಶಾತ್ ಸಹಕಾರ ಸಚಿವರೇ ನಿಧನರಾಗಿದ್ದರಿಂದ ಅಧ್ಯಕ್ಷರಾಗಿ ನಾಗರಾಜ್ ಅವರೇ ಮುಂದುವರೆಯಲು ಸಾಧ್ಯವಾಯಿತು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin