ನ್ಯಾಯಕ್ಕಾಗಿ ಕಣ್ಣೀರಿಟ್ಟ ಬಿಬಿಎಂಪಿ ಮಹಿಳಾ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

BBMP--0014

ಬೆಂಗಳೂರು, ಜೂ.29- ಬಿಬಿಎಂಪಿ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ, ಆಶಾ ಸುರೇಶ್, ಮಮತಾ ವಾಸುದೇವ ಮೂರ್ತಿಯವರ ಪ್ರತಿಭಟನೆ ಬಿಬಿಎಂಪಿ ಸಭೆಯಲ್ಲಿ ಯಥಾಸ್ಥಿತಿ ಮುಂದುವರಿದಿತ್ತು. ರಾಜರಾಜೇಶ್ವರಿನಗರದ ಶಾಸಕರ ಉಪಟಳ ಹೆಚ್ಚಾಗಿದೆ. ಅವರಿಂದ ನ್ಯಾಯ ಬೇಕಾಗಿದೆ. ಇಲ್ಲದಿದ್ದರೆ ನಮಗೆ ವಿಷ ಕೊಡಿ ಎಂದು ಪಟ್ಟು ಹಿಡಿದು ಮೇಯರ್ ಮುಂದಿನ ಬಾವಿಗಿಳಿದು ಕಣ್ಣೀರಿಡುತ್ತ ಪ್ರತಿಭಟನೆ ನಡೆಸಿದರು.

ಮುಂದೂಡಿದ ಬಿಬಿಎಂಪಿ ಸಭೆ ಮತ್ತೆ ಪ್ರಾರಂಭವಾದಾಗ ಈ ಮೂವರು ಮಹಿಳಾ ಸದಸ್ಯರು ಪ್ರತಿಭಟನೆ ಹಿಂತೆಗೆದುಕೊಳ್ಳಲಿಲ್ಲ. ಜೆಡಿಎಸ್ ಶಾಸಕರಾದ ಕೆ.ಗೋಪಾಲಯ್ಯ, ಟಿ.ಎ.ಶರವಣ ಅವರು ಮನವೊಲಿಕೆ ಮಾಡಲು ಯತ್ನಿಸಿದರಾದರೂ ಇವರು ಜಪ್ಪಯ್ಯ ಎನ್ನದೆ ಮೇಯರ್ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಿ ನ್ಯಾಯ ಬೇಕೆಂದು ಆಗ್ರಹಿಸಿದರು.

ಕೆ.ಗೋಪಾಲಯ್ಯ ಹಾಗೂ ಶರವಣ ಅವರು ಮೂರು ದಿನ ಕಾಲಾವಕಾಶ ನೀಡಿ. ಅಷ್ಟರಲ್ಲಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದರಾದರೂ ಇವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಆಶಾ ಸುರೇಶ್, ಮಂಜುಳಾ ನಾರಾಯಣಸ್ವಾಮಿ ಒಪ್ಪಿದರಾದರೂ ಮಮತಾ ವಾಸುದೇವಮೂರ್ತಿ ಒಪ್ಪಲಿಲ್ಲ. ಶಾಸಕರ ಉಪಟಳ ಹೆಚ್ಚಾಗಿದೆ. ಏನೇ ಪರಿಹಾರವಾದರೂ ಇಲ್ಲೇ ಆಗಲಿ ಎಂದು ಪಟ್ಟು ಹಿಡಿದರು.

ಬಿಜೆಪಿ ಸದಸ್ಯರೆಲ್ಲ ಪ್ರತಿಭಟನೆ ನಡೆಸಲು ಹೊರಗಡೆ ಇದ್ದರೂ ಮಮತಾ ವಾಸುದೇವಮೂರ್ತಿಯವರು ಒಳಗೆ ಪ್ರತಿಭಟನೆ ನಡೆಸುತ್ತಿದ್ದರು. ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಇದ್ದರು. ಪ್ರತಿಭಟನೆ ಮುಂದುವರಿದು ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಮೇಯರ್ ಜಿ.ಪದ್ಮಾವತಿ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin