ನ್ಯಾಯಲಯಕ್ಕೆ ಅಗೌರವ : ವಕೀಲರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಆ.25- ಚನ್ನರಾಯಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕನ ಉದ್ಧಟತನ ವಾದ ವಿರೋಧಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ವಕೀಲ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ವಕೀಲರ ಸಂಘದ ಅಧ್ಯಕ್ಷ ರಾಚಪ್ಪ ಮಾತನಾಡಿ ದೇಶದಲ್ಲಿ ನ್ಯಾಯಾಲಯಕ್ಕೆ ತನ್ನದೆ ಆದ ಗೌರವವಿದ್ದು, ಅದರ ಆದೇಶವನ್ನು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ನ್ಯಾಯಾಲಯದ ಆದೇಶಕ್ಕೆ ಅಗೌರವನ್ನುಂಟು ಮಾಡಿರುವ ವೃತ್ತ ನಿರೀಕ್ಷಕರಿಗೆ ಸೇವೆ ಸಲ್ಲಿಸಲು ಯಾವುದೇ ನೈತಿಕ ಹಕ್ಕಿಲ್ಲ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ವಕೀಲರಾದ ಈ. ಮಹದೇವಕುಮಾರ್, ಶ್ರೀನಿವಾಸ್, ಗುಂಡಾರೆಡ್ಡಿ, ಷಣ್ಮುಗಂ ಮಹೇಶ್, ಮಹೇಶ್‍ಬಾಬು, ಸಿದ್ದರಾಜು, ಮುರಳಿಧರ್, ಮೃತ್ಯುಂಜಯ, ನಾಗರಾಜಯ್ಯ, ತಗಡೂರು ಶ್ರೀಕಂಠು, ಆನಂದರಾಜ್, ರವೀಶ್, ಸೋಮಯ್ಯ, ಸೋಮಶೇಖರ್, ಸೋಮಣ್ಣ, ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin