ನ್ಯಾಯಾಧೀಕರಣದ ತೀರ್ಪು ರಾಜ್ಯದ ಜನರ ದೌರ್ಭಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಸೆ.21- ಕಾವೇರಿ ನ್ಯಾಯಾಧೀಕರಣವು ಕರ್ನಾಟಕಕ್ಕೆ ಮರಣ ಶಾಸನವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯೂ ಕರ್ನಾಟಕಕ್ಕೆ ಅನ್ಯಾಯವೆಸಗಿರುವವರ ವಿರುದ್ದ ಮತ್ತು ನಾಡು ನುಡಿ, ನೆಲ ಜಲಕ್ಕಾಗಿ ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್‍ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಶಾಂತಿಯುತ ಹೊರಾಟವನ್ನು ಮಾಡುತಿದ್ದೇವೆ ಎಂದು ಕರವೇ (ಪ್ರವೀಣ್‍ಕುಮಾರ್ ಶೆಟ್ಟಿ) ಜಿಲ್ಲಾಧ್ಯಕ್ಷ ಸತೀಶ್ ಪಾಟೀಲ್ ಹೇಳಿದರು. ಪಟ್ಟಣದ ಜೆಪಿ ನಗರದಲ್ಲಿ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿಯವರ ಹುಟ್ಟುಹಬ್ಬದ ಅಂಗವಾಗಿ ನೂತನವಾಗಿ ಪ್ರಾರಂಭಿಸಲಾದ ಜೆಪಿ ನಗರ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಇಲ್ಲದೆ ಕೆರೆಕಟ್ಟೆಗಳು ಸೇರಿದಂತೆ ಯಾವುದೇ ಜಲಾಶಯಗಳಲ್ಲೂ ನೀರಿಲ್ಲದೆ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನ್ಯಾಯಾಧೀಕರಣ ತೀರ್ಪ ನೀಡುತ್ತಿರುವುದು ಕರ್ನಾಟಕದ ಜನರ ದೌರ್ಭಾಗ್ಯ ಎಂದರು.
ವೃತ್ತ ನಿರೀಕ್ಷಕ ಲೊಕೇಶ್ ಮಾತನಾಡಿ, ಕರ್ನಾಟಕದಲ್ಲಿ ಕರವೇ ಸಂಘಟನೆಗಳು ಹೊರಾಟ ಮಾಡಿರದಿದ್ದರೆ ಕರ್ನಾಟಕದಲ್ಲಿ ಕನ್ನಡಿಗರೆ ನಾಪತ್ತೆಯಾಗುವ ಸಂಭವವಿತ್ತು. ಕನ್ನಡದ ನಾಡು ನುಡಿಗಾಗಿ ಯಾರು ಮಾಡದಂತಹ ಕೆಲಸಗಳನ್ನು ಸಂಘಟನೆಗಳು ಮಾಡುತ್ತಿವೆ. ಕನ್ನಡಿಗರು ಶಾಂತಿ ಪ್ರಿಯರು. ಶಾಂತಿಯುತವಾಗಿ ಹೊರಾಟಗಳನ್ನು ಮಾಡಬೇಕಿದೆ ಎಂದರು.ಬೇಲೂರು ಅತ್ಯಂತ ಪ್ರವಾಸಿ ತಾಣದ ಜೊತೆಗೆ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಸ್ಥಳವಾಗಿರುವುದರಿಂದ ವಿಶೇಷವಾದ ಮಹತ್ವವನ್ನು ಹೊಂದಿದೆ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷೆ ಉಮಾ(ಮುದ್ದಮ್ಮ), ಮಾಜಿ ಉಪಾಧ್ಯಕ್ಷೆ ಗಾಯತ್ರಿ, ಕರವೇ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ತಾಲೂಕು ಕರವೇ ಅಧ್ಯಕ್ಷ ವಿ.ಎಸ್.ಭೋಜೇಗೌಡ, ಪಿಎಸ್‍ಐ ಸುರೇಶ್, ತಾಲೂಕು ಉಪಾಧ್ಯಕ್ಷ ರಾಘವೇಂದ್ರಹೊಳ್ಳ, ಕಾರ್ಯಾಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ಜಯಪ್ರಕಾಶ್, ನಗರಾಧ್ಯಕ್ಷ ಟೈಲ್ಸ್ ಗಿರೀಶ್, ತಾಲೂಕು ಯುವ ಅಧ್ಯಕ್ಷ ಕಲಾಶ್ರೀ ದೀಪು, ಸಾಂಸ್ಕೃತಿಕ  ಘಟಕದ ಚನ್ನಕೇಶವೇಗೌಡ, ಉಪಾಧ್ಯಕ್ಷ ಗಣೇಶ್, ಜೆಪಿ ನಗರ ಘಟಕದ ರವಿ ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin