ನ್ಯಾಯಾಲಯದಲ್ಲಿ ಟ್ರಂಪ್‍ಗೆ ಭಾರಿ ಮುಖಭಂಗ : ಮುಸ್ಲಿಂ ವಲಸಿಗರಲ್ಲಿ ಮಂದಹಾಸ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಫೆ.6- ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರು ಅಮೆರಿಕ ಪ್ರವೇಶಿಸಿದಂತೆ ಹೇರಿದ್ದ ನಿರ್ಬಂದವನ್ನು ಮತ್ತೆ ಜಾರಿಗೊಳಿಸಲು ಅವಕಾಶ ನೀಡುವಂತೆ ಕೋರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಲ್ಲಿಸಿದ್ದ ಮನವಿಯನ್ನು ಮೇಲ್ಮನವಿ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ, ಅಮೆರಿಕಕ್ಕೆ ಧಾವಿಸಲು ವಿದೇಶಿಯರು ಮುಂದಾಗಿದ್ದಾರೆ.   ಟ್ರಂಪ್ ಆದೇಶದಿಂದ ಅಮೆರಿಕಕ್ಕೆ ಮರಳಲು ಸಾಧ್ಯವಾಗದೇ ಹತಾಶರಾಗಿದ್ದ ವಲಸಿಗರು ಇದರಿಂದ ನೆಮ್ಮದಿಯ ನಿಟ್ಟ್ಟುಸಿರುಬಿಟ್ಟಿದ್ದಾರೆ.   ಟ್ರಂಪ್ ಆದೇಶಕ್ಕೆ ಫೆಡರಲ್ ನ್ಯಾಯಾಧೀಶ ಜೇಮ್ಸ್ ರಾಬರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿರುವ ಹಾಗೂ ಟ್ರಂಪ್ ಆಡಳಿತ ಮನವಿಯನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ಪ್ರಯೋಜನ ಪಡೆಯಲು ವಲಸಿಗರು ಮುಂದಾಗಿದ್ದಾರೆ.

ಇರಾನ್‍ನಿಂದ 40ಕ್ಕೂ ಹೆಚ್ಚು ಮಂದಿ ನಿನ್ನೆ ಬೋಸ್ಟನ್‍ನ ಲೋಗನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದರು. ಏಳು ಮುಸ್ಲಿಂ ದೇಶಗಳ ನಾಗರಿಕರಿಗೆ ಪ್ರವೇಶ ನಿರಾಕರಿಸಿದ ಒಂದು ವಾರದ ಬಳಿಕ, ಅಮೆರಿಕ ತಲುಪಿದ ಮೊದಲ ತಂಡದ ಪ್ರಜೆಗಳಾಗಿದ್ದಾರೆ. ಅಮೆರಿಕಕ್ಕೆ ಧಾವಿಸಲು ವಿದೇಶಿಯರು ಮುಂದಾಗಿದ್ದು, ಸಾವಿರಾರು ಮಂದಿ ವಿಮಾನ ಟಿಕೆಟ್‍ಗಳನ್ನು ಖರೀದಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin