ನ್ಯಾಷನಲ್ ಕಾಲೇಜು-ಪುಟ್ಟೇನಹಳ್ಳಿ ಪ್ರಾಯೋಗಿಕ ಮೆಟ್ರೋ ಸಂಚಾರದ ಹಿನ್ನೆಲೆಯಲ್ಲಿ 3 ನಿಲ್ದಾಣಗಳ ಸಂಚಾರ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Namm-Metro

ಬೆಂಗಳೂರು, ನ.19– ನ್ಯಾಷನಲ್ ಕಾಲೇಜು ಹಾಗೂ ಪುಟ್ಟೇನಹಳ್ಳಿ ನಡುವೆ ಇರುವ ಮೆಟ್ರೋ ರೈಲು ಮಾರ್ಗ ಪ್ರಾಯೋಗಿಕ ಸಂಚಾರ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಮೂರು ಮೆಟ್ರೋ ನಿಲ್ದಾಣಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕುವೆಂಪು ನಗರದ, ಶ್ರೀರಾಂಪುರ ಹಾಗೂ ಸಂಪಿಗೆ ರಸ್ತೆ ನಿಲ್ದಾಣಗಳ ಸೇವೆ ಇರುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.  ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಪ್ರಾಯೋಗಿಕ ಸಂಚಾರ ಮೆಟ್ರೋ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗುವುದು. ಒಂದು ಗಂಟೆಯಿಂದಲೇ ನಿಲ್ದಾಣದಲ್ಲಿ ಟೋಕಲ್ ನೀಡುವುದನ್ನು ನಿಲ್ಲಿಸಲಾಗುವುದು. ಸಂಜೆ 4 ಗಂಟೆ ನಂತರ ಮತ್ತೆ ಯಥಾಸ್ಥಿತಿ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.
► Follow us on –  Facebook / Twitter  / Google+

Facebook Comments

Sri Raghav

Admin