ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿ ಘಟಿಕೋತ್ಸವ : 571 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

natinal

ಬೆಂಗಳೂರು, ಆ.28- ನ್ಯಾಷನಲ್ ಲಾ ಸ್ಕೂಲ್ ಆಫ್ ಯೂನಿವರ್ಸಿಟಿ ಘಟಿಕೋತ್ಸವದಲ್ಲಿ ಇಂದು 571 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್‌ಮುಖರ್ಜಿ ಅವರ ಸಮ್ಮುಖದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಪದವಿ ಪ್ರದಾನ ಮಾಡಿದರು.  183 ವಿದ್ಯಾರ್ಥಿಗಳಿಗೆ ವ್ಯವಹಾರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, 69 ಮಂದಿಗೆ ಬಿಎ ಆನರ‍್ಸ್ ಪದವಿ, 60 ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾನೂನು ಮತ್ತು ನೀತಿಯಲ್ಲಿ ಸ್ನಾತಕೋತ್ತರ ಡಿಪ್ಲೊಮೊ, 55 ಮಂದಿಗೆ ಬೌದ್ಧಿಕ ಆಸ್ತಿಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮೊ, 48 ಮಂದಿಗೆ ಎಲ್‌ಎಲ್‌ಎಂ, 45ಮಂದಿಗೆ ಸೈಬರ್ ಕಾನೂನು ಮತ್ತು ಫೊರೆನ್ಸಿಕ್ ಸ್ನಾತಕೋತ್ತರ ಡಿಪ್ಲೊಮೊ, 41 ಮಂದಿಗೆ ಸ್ನಾತಕೋತ್ತರ ಸಾರ್ವಜನಿಕ ನೀತಿ, 26ಮಂದಿಗೆ ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮೊ, 15ಮಂದಿಗೆ ಮಾನವ ಹಕ್ಕುಗಳ ಕಾನೂನಿನಡಿ ಸ್ನಾತಕೋತ್ತರ ಡಿಪ್ಲೊಮೊ, 11 ಮಂದಿಗೆ ಡಾಕ್ಟರೇಟ್ ಪದವಿ, ಮಕ್ಕಳ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮೊ ಮತ್ತು ಗ್ರಾಹಕ ಕಾನೂನು ಮತ್ತು ಅದರ ಅನುಷ್ಠಾನದಲ್ಲಿನ ಸ್ನಾತಕೋತ್ತರ ಡಿಪ್ಲೊಮೊ ಪದವಿಯಲ್ಲಿ ತಲಾ 8ಮಂದಿ ಹಾಗೂ ತಲಾ ಇಬ್ಬರಿಗೆ ಎಲ್‌ಎಲ್‌ಡಿ ಪದವಿ ಪ್ರದಾನ ಮಾಡಲಾಯಿತು.

69 ಮಂದಿಗೆ ಎಲ್ ಎಲ್‌ಬಿ ಪದವಿ ಪ್ರದಾನ ಮಾಡಿದ್ದು, ಒಟ್ಟು 46 ಮಂದಿಗೆ ಸ್ನಾತಕೋತ್ತರ ಹಾಗೂ ಕಾನೂನಿನಲ್ಲಿ ಪದವಿ ಪ್ರದಾನ ಮಾಡಲಾಯಿತು.  ಕೇರಳದ ತ್ರಿವೇಂಡ್ರಮ್ ಮೂಲದ ಎಲ್.ಗೋಪಿಕಾಮೂರ್ತಿ ಅವರು ಬಿಎ ಆನರ‍್ಸ್ ಕಾನೂನು ಪದವಿಯಲ್ಲಿ 11 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಮೂಲತಃ ಕೇರಳದವರಾದ ಇವರ ತಂದೆ ತ್ರಿವೆಂಡ್ರಮ್‌ನಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಲಕ್ಷ್ಮಿ ವಿಮಾನಯಾನಕ್ಕೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಿಕಾ, ನನಗೆ ಮೊದಲು ಇಂಜನಿಯರಿಂಗ್‌ನಲ್ಲಿ ಸೀಟು ಸಿಕ್ಕಿತು. ಒಂದು ವರ್ಷ ಅಲ್ಲಿ ಓದಿ ಅನಂತರ ಕಾನೂನು ವ್ಯಾಸಂಗದ ಸೆಳೆತಕ್ಕೆ ಒಳಗಾಗಿ ಇಂಜನಿಯರಿಂಗ್ ಬಿಟ್ಟು ನ್ಯಾಷನಲ್ ಲಾ ಕಾಲೇಜಿಗೆ ಸೇರಿದೆ. ದಿನಪೂರ್ತಿ ಓದುತ್ತಿದ್ದೆ. ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ. ನನಗೆ ಏನಾದರು ಸಾಸಬೇಕೆಂಬ ಹಂಬಲವಿತ್ತು. ಹಾಗಾಗಿ ವ್ಯಾಸಂಗದಲ್ಲಿ ಹೆಚ್ಚು ಸಮಯ ಕಳೆದೆ ಎಂದು ಹೇಳಿದರು.

ಬಿಸಿಎಲ್ ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಆಕ್ಸ್‌ಫರ್ಡ್ ಯೂನಿವರ್ ಸಿಟಿಯಲ್ಲಿ ಅವಕಾಶ ಸಿಕ್ಕಿದೆ. ವಿದ್ಯಾರ್ಥಿ ವೇತನ ಕೂಡ ಸಿಕ್ಕಿದೆ. ಅಲ್ಲಿ ಓದಿದ ನಂತರ ಲಂಡನ್‌ನ ಕಾನೂನು ಸಂಸ್ಥೆಯೊಂದಿಗೆ ಸೇರಿಕೆಲಸ ಮಾಡುವ ಗುರಿ ಇದೆ ಎಂದು ಹೇಳಿದರು.  ಮೂರು ಚಿನ್ನದ ಪದಕಗಳನ್ನು ಗಳಿಸಿದ ಶ್ರೇಯಾಪ್ರಕಾಶ್ ಮಾತನಾಡಿ, ದೇಶದ ಹಳೆಯ ಕಾನೂನುಗಳನ್ನು ಪರಾಮರ್ಶಿಸುವ ಸಲುವಾಗಿ ದೆಹಲಿಯ ಸಂಸ್ಥೆಯೊಂದರ ಜತೆ ಕೈ ಜೋಡಿಸಿ ಕೆಲಸ ಮಾಡುವುದಾಗಿ ತಿಳಿಸಿದರು.ದೀಕ್ಷಿತಾ, ಸೋನಾಕ್ಷಿ ಸಕ್ಸೇನಾ ಅವರು ತಲಾ ಮೂರು ಚಿನ್ನದ ಪದಕಗಳನ್ನು, ಅಶ್ವಿನಿ ವಡಿಯಾಲಿಂಗಂ 5 ಚಿನ್ನದ ಪದಕ, ರಕ್ತಿಕಾಸಿನ್ಹಾ, ರಘುವೀರ್ ಸಿಂಗ್ ಮೀನಾ, ಕೌಸ್ತವ್ ಶಾ ಅವರು ತಲಾ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಸುಹಿನಾಜೋಶಿ, ಅರುಣಿಮ ಅರುಣ್‌ಕೇಡಿಯಾ, ರಾಕಾಕಪೂರ್, ನಯನತಾರಾ ರವಿಚಂದ್ರನ್, ತನ್ಮಯದಂಗಿ, ಮಲ್ಲತ್ ಸಬಿಕಿ, ಅಥುಲ್ ಕೃಷ್ಣಮೂರ್ತಿ, ಸುಮಯಾ ಮಹೇಶ್ವರಿ ಅವರು ತಲಾ ಒಂದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.  ಒಂದು ವರ್ಷದ ಎಲ್‌ಎಲ್‌ಎಂ ಪದವಿಯಲ್ಲಿ ಅಕೃತಿ ಗೌತಮ್ 3 ಚಿನ್ನ, ಸಾಕ್ಷಾತ್‌ಬತ್ಸಾಲ್ ತಲಾ ಎರಡು ಚಿನ್ನದ ಪದಕ ಗಳಿಸಿದ್ದಾರೆ.  ದೇವಾಸಿಯಾಯಾದವ್, ಆರತಿಶರ್ಮ, ಅಶಾನ್‌ಸಿಂಗ್ ಅವರು ತಲಾ ಒಂದೊಂದು ಚಿನ್ನದ ಪದಕ ಪಡೆದಿದ್ದಾರೆ. ಸಾರ್ವಜನಿಕ ಸ್ನಾತಕೋತ್ತರ ಪದವಿಯಲ್ಲಿ ದೀಪಾ ಕೆ.ಎಸ್., ನಿವೇದಿತ ಮುಕೀಜಾ ಅವರುಗಳು ತಲಾ ಒಂದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.  ಪದಕ ಗಳಿಸುವಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಸಿದ್ದು ಗಮನಾರ್ಹ ಅಂಶ.

► Follow us on –  Facebook / Twitter  / Google+

 

Facebook Comments

Sri Raghav

Admin