ನ್ಯೂಜಿಲೆಂಡ್‍ನಲ್ಲೂ ಭಾರತೀಯರ ಮೇಲೆ ಹಲ್ಲೆ, ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ

Indian-Attack-de

ವೆಲ್ಲಿಂಗ್ಟನ್, ಮಾ.7-ಅಮೆರಿಕದಲ್ಲಿ ಇಬ್ಬರು ಭಾರತೀಯರ ಕಗ್ಗೊಲೆ ಮತ್ತು ಮತ್ತೊಬ್ಬನ ಮೇಲೆ ಹತ್ಯೆ ಯತ್ನದಿಂದ ವಲಸಿಗರಲ್ಲಿ ಅಭದ್ರತೆಯ ಭೀತಿ ಕಾಡುತ್ತಿರುವಾಗಲೇ, ಅತ್ತ ನ್ಯೂಜಿಲೆಂಡ್‍ನಲ್ಲೂ ಜನಾಂಗೀಯ ದ್ವೇಷ ಹೊಗೆಯಾಡುತ್ತಿದೆ. ವೆಲ್ಲಿಂಗ್ಟನ್‍ನಲ್ಲಿರುವ ಭಾರತೀಯ ಪ್ರಜೆ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿನ್ನ ದೇಶಕ್ಕೆ ತೊಲಗು ಎಂದು ದೌರ್ಜನ್ಯ ಎಸಗಲಾಗಿದೆ. ಅಲ್ಲದೇ ಪಂಜಾಬ್‍ನ ಮತ್ತೊಬ್ಬ ವ್ಯಕ್ತಿಯನ್ನೂ ಮೂದಲಿಸಿರುವ ಪ್ರಕರಣ ವರದಿಯಾಗಿವೆ.  ಅಕ್ಲೆಂಡ್ ನಗರದಲ್ಲಿ ಈ ಘಟನೆ ನಡೆದಿದ್ದು, ನರೀಂದರ್‍ವೀರ್ ಸಿಂಗ್ ಎಂಬುವರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ನ್ಯೂಜಿಲೆಂಡ್ ಪ್ರಜೆಗಳು ಇದ್ದ ವಾಹನಕ್ಕೆ ಮುಂದೆ ಹೋಗಲು ದಾರಿ ಮಾಡಿಕೊಟ್ಟರು. ಆದರೂ ಆ ಕಾರಿನಲ್ಲಿದ್ದವ ಅಶ್ಲೀಲ ಅರ್ಥದಲ್ಲಿ ಬೆರಳನ್ನು ತೋರಿಸಿ ಅಪಮಾನ ಮಾಡಿದ.

ನಂತರ ಮಾರ್ಗಮಧ್ಯೆ ಕಾರು ನಿಲ್ಲಿಸಿದ್ದ ನ್ಯೂಜಿಲೆಂಡ್ ಪ್ರಜೆಗಳಿಗೆ ಈ ಬಗ್ಗೆ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದಾಗ, ಅಶ್ಲೀಲ ಪದಗಳಲ್ಲಿ ನಿಂದಿಸಿದರು. ಅಲ್ಲದೇ ನಿನ್ನ ದೇಶಕ್ಕೆ ತೊಲಗು ಎಂದು ಅಬ್ಬರಿಸಿ ದೌರ್ಜನ್ಯ ಎಸಗಿದರು. ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಸಿಂಗ್ ಸ್ಥಳೀಯ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.   ಜನಾಂಗೀಯ ದ್ವೇಷದ ಕೆಟ್ಟ ಘಟನೆಯ ಅನುಭವ ಕೇವಲ ನರೀಂದರ್‍ವೀರ್ ಸಿಂಗ್ ಅವರಿಗೆ ಮಾತ್ರವಲ್ಲದೇ ಪಚಿಜಾನ್ ಮೂಲದ ಮತ್ತೊಬ್ಬ ಭಾರತೀಯನಿಗೂ ಆಗಿದೆ. ಬಿಕ್ರಮ್‍ಜಿತ್ ಸಿಂಗ್‍ಎಂಬುವರಿಗೂ ನ್ಯೂಜಿಲೆಂಡ್ ಪ್ರಜೆಯಿಂದ ದೌರ್ಜನ್ಯ ನಡೆದಿದೆ. ಸಿಂಗ್ ವೆಲ್ಲಿಂಗ್ಟನ್‍ನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಮತ್ತೊಂದು ಕಾರಿನಲ್ಲಿ ಬಂದ ಯುವಕನೊಬ್ಬ ಏಮ್ ಕಾರನ್ನು ನಿಧಾನವಾಗಿ ಚಾಲನೆ ಮಾಡು. ಇಲ್ಲಿನ ವೇಗದ ಮೀತಿ ನಿನಗೆ ಗೊತ್ತಿಲ್ಲವೇ? … ನಿನ್ನ ದೇಶಕ್ಕೆ ತೊಲಗು ಎಂದು ಅಶ್ಲೀಲ ಪದದಲ್ಲಿ ನಿಂದಿಸಿದ್ದಾನೆ.

ನಾನು ಕಾರನ್ನು ವೇಗವಾಗಿ ಚಾಲನೆ ಮಾಡುತ್ತಿರಲಿಲ್ಲ. ಆದರೂ ನನಗೆ ಕೆಟ್ಟ ಮಾತುಗಳಲ್ಲಿ ನಿಂದಿಸಲಾಗಿದೆ. ನನಗೆ ತುಂಬಾ ಬೇಸರವಾಗಿದೆ. ನ್ಯೂಜಿಲೆಂಡ್‍ನಲ್ಲಿ ನಾನು ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನೆಲೆಸಿದ್ದೇನೆ. ಇದು ಶಾಂತಿಪ್ರಿಯ ದೇಶ. ಇಲ್ಲಿನ ಜನರನ್ನು ನಾನು ಇಷ್ಟಪಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಜನಾಂಗೀಯ ಅಸಹನೆ ಹೆಚ್ಚಾಗುತ್ತಿದೆ ಎಂದು ಸಿಂಗ್ ನೊಂದು ನುಡಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin