ನ್ಯೂಜಿಲೆಂಡ್ ಕಡಲ ತೀರದಲ್ಲಿ 400ಕ್ಕೂ ಹೆಚ್ಚು ತಿಮಿಂಗಿಲಗಳ ಮಾರಣಹೋಮ..!

ಈ ಸುದ್ದಿಯನ್ನು ಶೇರ್ ಮಾಡಿ

whwhwhwh

ವೆಲ್ಲಿಂಗ್ಟನ್. ಫೆ.10 : ನ್ಯೂಜಿಲೆಂಡ್ ನಲ್ಲಿ ಕಡಲ ತೀರದಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದಿದೆ. ಸುಮಾರು 400 ಕ್ಕೂ ಹೆಚ್ಚು ತಿಮಿಂಗಲಗಳು ಸತ್ತು ಸಮುದ್ರದ ದಡದಲ್ಲಿ ಬಂದು ಬಿದ್ದಿವೆ. ದಕ್ಷಿಣ ಐಲ್ಯಾಂಡ್ ನ ಗೋಲ್ಡನ್ ಬೇ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು. ಸಮುದ್ರ ತಟದಲ್ಲಿ ಬಂದು ಬಿದ್ದ ತಿಮಿಂಗಲಗಳಲ್ಲಿ ಇನ್ನೂ ಜೀವಂತವಾಗಿರುವ ತಿಮಿಂಗಲುಗಳನ್ನು ಬದುಕಿಸಿ ಸಮುದ್ರಕ್ಕೆ ಬಿಡುವ ಕಾರ್ಯ ಭರದಿಂದ ಸಾಗಿದೆ.

ಈ ತಿಮಿಂಗಲಗಳು ಸಮುದ್ರದ ದಡದಲ್ಲಿ ಬಂದು  ಒದ್ದಾಡಿ ಸಾಯಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಜ್ಞಾನಿಗಳು ಹೇಳುವ ಪ್ರಕಾರ ವಯಸ್ಸಾಗಿಯೋ , ಅನಾರೋಗ್ಯದಿಂದಲೋ ಅಥವಾ ಅವುಗಳ ಸಂಚಾರದಲ್ಲಿ ದಿಕ್ಕು ಬದಲಾಗಿಯೋ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

Whales 1

ಇದು ಹಿಂದೆಂದೂ ನ್ಯೂಜಿಲೆಂಡ್ ಕಾಣದಂತ ಘಟನೆಯಾಗಿದ್ದು ಸುಮಾರು 500 ಮಂದಿ ಸ್ವಯಂಸೇವಕರು ತಿಮಿಂಗಿಲಗಳನ್ನು ಬದುಕಿಸಲು ಹರಸಾಹಸ ಪಡುತ್ತಿದ್ದಾರೆ. ಸುಮಾರು 100 ತಿಮಿಂಗಿಲಗಳು ಬದುಕುಳಿಯಬಹುದೆಂಬ ನಿರೀಕ್ಷೆಯಿಂದ ಮರಳಿ ಅವುಗಳನ್ನು ಸಮುದ್ರಕ್ಕೆ ಬಿಟ್ಟಿದ್ದಾರೆ. ಒಂದೊಂದು ತಿಮಿಂಗಿಲವೂ ಸುಮಾರು 2 ಟನ್ ಭಾರವಿದ್ದಿದ್ದರಿಂದ ಅವುಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಸಾಕಷ್ಟು ಹರಸಾಹಸ ಪಟ್ಟು ಸಮುದ್ರಕ್ಕೆ ಬಿಟ್ಟಿದ್ದಾರೆ.  ಇತ್ತೀಚಿನ ವರ್ಷಗಳಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ಅತಿ ದೊಡ್ಡ ದುರಂತ ಇದಾಗಿದೆ. 1918ರಲ್ಲಿ ಚಾಥಮ್ ದ್ವೀಪದಲ್ಲಿ ಸುಮಾರು 1000 ತಿಮಿಂಗಿಲಗಳು ಸಾವನ್ನಪ್ಪಿದ್ದವು. 1985ರಲ್ಲಿ ಆಕ್ಲೆಂಡ್ ನಲ್ಲಿ 450 ತಿಮಿಂಗಿಲಗಳು ಸತ್ತು ದಡಕ್ಕೆ ಬಂದು ಬಿದ್ದಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Whales are stranded at Farewell Spit near Nelson, New Zealand Friday, Feb. 10, 2017. New Zealand volunteers formed a human chain in the water at a remote beach on Friday as they tried to save about 100 whales after more than 400 of the creatures beached themselves in one of the worst whale strandings in the nation's history. About three-quarters of the pilot whales were already dead when they were found Friday morning at Farewell Spit at the tip of the South Island. (Tim Cuff/New Zealand Herald via AP)
Whales are stranded at Farewell Spit near Nelson, New Zealand Friday, Feb. 10, 2017. New Zealand volunteers formed a human chain in the water at a remote beach on Friday as they tried to save about 100 whales after more than 400 of the creatures beached themselves in one of the worst whale strandings in the nation’s history. About three-quarters of the pilot whales were already dead when they were found Friday morning at Farewell Spit at the tip of the South Island. (Tim Cuff/New Zealand Herald via AP)

Whales3

Whales6 Whales7

Whales8

 

 

Facebook Comments

Sri Raghav

Admin