ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಚಾನ್ಸ್…?

ಈ ಸುದ್ದಿಯನ್ನು ಶೇರ್ ಮಾಡಿ

Kannada

ನವದೆಹಲಿ,ಸೆ.11- ನ್ಯೂಜಿಲೆಂಡ್ ವಿರುದ್ಧ ನಡೆಯ ಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ನಾಳೆ ಭಾರತ ತಂಡವನ್ನು ಪ್ರಕಟಿಸಲಾಗುವುದು. ಆಯ್ಕೆ ಪ್ರಕ್ರಿಯೆಯ ವೇಳೆ ವೆಸ್ಟ್‍ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಸಾಧನೆ ತೋರಿರುವ ಕನ್ನಡಿಗ ಲೋಕೇಶ್ ರಾಹುಲ್ ಅವರ ಸ್ಥಾನ ಭದ್ರವಾಗಿದ್ದು , ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕನ್ನಡಿಗರಾದ ಪಾಂಡೆ ಹಾಗೂ ಕರುಣ್‍ನಾಯರ್ ಅವರು ಕೂಡ 15ರ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಇನ್ನು ಇದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ರೋಹಿತ್ ಶರ್ಮಾರನ್ನು ಆಯ್ಕೆ ಮಂಡಳಿ ಮುಖ್ಯಸ್ಥ ಸಂದೀಪ್ ಪಾಟೀಲ್ ಪರಿಗಣಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಕೂಡ ಆಯ್ಕೆಯಾಗುವುದು ಖಚಿತವಾದರೆ, ವೃದ್ಧಿಮಾನ್ ಶಾರೇ ವಿಕೆಟ್ ಕೀಪರ್ ಆಗಿ ಮುಂದುವರೆಯಲಿದ್ದಾರೆ. ಕಳೆದ ಬಾರಿ ನ್ಯೂಜಿಲೆಂಡ್‍ನ ವಿರುದ್ಧದ ಸರಣಿಯಲ್ಲಿ ಮುಖ ಭಂಗವನ್ನು ಅನುಭವಿಸಿರುವ ಭಾರತ ತಂಡವು ಈ ಬಾರಿ ಸ್ವದೇಶದಲ್ಲಿ ನಡೆಯಲಿರುವ ಸರಣಿಯನ್ನು ಶತಾಯಗತಾಯ ಗೆದ್ದು ಮುಯ್ಯಿಗೆ ಮುಯ್ಯಿ ತೀರಿಸಬೇಕೆಂಬ ತವಕದಲ್ಲಿರುವುದರಿಂದ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಚರ್ಚಿಸಿ ಹಿರಿಯರ ಹಾಗೂ ಹೊಸಬರ ಸಮತೋಲನವಿರುವ ತಂಡವನ್ನೇ ಆಯ್ಕೆ ಮಾಡಲಿದ್ದಾರೆ.
ಟೆಸ್ಟ್ ಪಂದ್ಯಗಳ ವಿವರ:
ಮೊದಲ ಟೆಸ್ಟ್: ಸೆ.22-26, ಸ್ಥಳ: ಗ್ರೀನ್ ಪಾರ್ಕ್, ಕಾನ್ಪುರ
ಎರಡನೆ ಟೆಸ್ಟ್: ಸೆ.30- ಅಕ್ಟೋಬರ್ 4, ಸ್ಥಳ: ಈಡನ್ ಗಾರ್ಡನ್, ಕೋಲ್ಕತ್ತಾ
ಮೂರನೆ ಟೆಸ್ಟ್: ಅಕ್ಟೋಬರ್ 8- 12, ಸ್ಥಳ: ಹೋಲ್ಕರ್ ಕ್ರಿಕೆಟ್ ಮೈದಾನ, ಇಂದೋರ್

Facebook Comments

Sri Raghav

Admin