ನ್ಯೂಜಿಲೆಂಡ್ ನಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ, ಅಪ್ಪಳಿಸಿದ ಸುನಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Tsunami

ಕ್ರೈಸ್ಟ್ ಚರ್ಚ್, ನ.13 : ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಿಂದ 95 ಕಿ.ಮೀ. ದೂರದಲ್ಲಿ 7.8 ಪ್ರಮಾಣದ ಪ್ರಬಲ ಭೂಕಂಪ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸಿದೆ. ಸೋಮವಾರ ಸ್ಥಳೀಯ ಸಮಯ ಬೆಳಗಿನ ಜಾವ 12 ಗಂಟೆಗೆ ಭೂಕಂಪವಾಗಿದೆ. ಭೂಕಂಪ ಸಂಭವಿಸಿದ ಎರಡು ಗಂಟೆಯ ನಂತರ ನ್ಯೂಜಿಲೆಂಡ್ ನ ಈಶಾನ್ಯ ಕರಾವಳಿಗೆ ಸುನಾಮಿ ಅಪ್ಪಳಿಸಿದೆ. ಕಡಲತೀರದಿಂದ ಜನರು ಒಳನಾಡಿಗೆ ಸ್ಥಳಾಂತರಗೊಳ್ಳಬೇಕು ಅಥವಾ ಎತ್ತರದ ಸ್ಥಳಕ್ಕೆ ತೆರಳಬೇಕು ಎಂದು ಸಂದೇಶ ರವಾನಿಸಲಾಗಿದೆ. ಸೋಷಿಯಲ್ ಮೀಡಿಯಾ ಮುಖಾಂತರ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ.

ಕ್ರೈಸ್ಟ್ ಚರ್ಚ್ ನಿಂದ 181 ಕಿ.ಮೀ. ದೂರದಲ್ಲಿರುವ ಕೈಕೌರಾ ಎಂಬಲ್ಲಿ ಎರಡು ಮೀಟರ್ ಎತ್ತರದ ಅಲೆಗಳು ಎದ್ದಿದ್ದು, ವೆಲ್ಲಿಂಗ್ಟನ್ ಮತ್ತಿತರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಅಲೆಗಳು ತಲುಪುತ್ತಿವೆ ಎಂದು ವೆದರ್ವಾಚ್ ವೆಬ್ ಸೈಟ್ ವರದಿ ಮಾಡಿದೆ. ಚಾಧಮ್ ದ್ವೀಪದ ಜನರು ಈ ಭೀಕರ ಭೂಕಂಪದಿಂದ ಭಯಭೀತರಾಗಿದ್ದು, ಸಾವಿರಾರು ಜನರು ಸುನಾಮಿಯ ಭಯದಿಂದ ಮನೆಗಳನ್ನು ತೊರೆದು ದೂರ ಪ್ರದೇಶಕ್ಕೆ ತೆರಳುತ್ತಿದ್ದಾರೆ ಎಂದು ರೇಡಿಯೋ ನ್ಯೂಜಿಲೆಂಡ್ ಮಾಹಿತಿ ನೀಡಿದೆ. ಕ್ರೈಸ್ಟ್ ಚರ್ಚ್ ನಲ್ಲಿ 2011ರಲ್ಲಿ ಬಾರೀ ಭೂಕಂಪ ಸಂಭವಿಸಿ 185 ಜನರನ್ನು ಬಲಿ ಪಡೆದಿತ್ತು .

► Follow us on –  Facebook / Twitter  / Google+

Facebook Comments

Sri Raghav

Admin