ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

NZ-pm

ವೆಲ್ಲಿಂಗ್ಟನ್, ಡಿ.5-ಎಂಟು ವರ್ಷಗಳ ಸುದೀರ್ಘ ಆಳ್ವಿಕೆ ನಂತರ ನ್ಯೂಜಿಲೆಂಡ್‍ನ ಜನಪ್ರಿಯ ಪ್ರಧಾನಮಂತ್ರಿ ಜಾನ್ ಕೀ ಇಂದು ದಿಢೀರ್ ರಾಜೀನಾಮೆ ಪ್ರಕಟಿಸಿ ದೇಶದ ಜನರಲ್ಲಿ ದಿಗ್ಭ್ರಮೆ ಮೂಡಿಸಿದ್ದಾರೆ. ಇದು ನಾನು ಕೈಗೊಂಡ ಅತ್ಯಂತ ಕಠಿಣ ನಿರ್ಧಾರ. ನಾನು ಮುಂದೆ ಏನು ಮಾಡಬೇಕು ಎಂಬುದು ನನಗೆ ತಿಳಿದಿಲ್ಲ. ಎಂಟು ವರ್ಷಗಳ ರಾಜಕೀಯ ಬದುಕು ನನಗೆ ತೃಪ್ತಿ ನೀಡಿದೆ. ದೇಶದ ಮತ್ತು ಪಕ್ಷದ ನಾಯಕನಾಗಿ ನನಗೆ ಇದು ಅವಿಸ್ಮರಣೀಯ ಅನುಭವ ನೀಡಿದೆ. ಹೊಸ ನಾಯಕನಿಗೆ ಅವಕಾಶ ನೀಡುವ ಉದ್ದೇಶದಿಂದ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಜಾನ್ ಕಿಕ್ಕಿರಿದು ತುಂಬಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೆರಿಲ್ ಲಿಂಚ್‍ನ ಮಾಜಿ ಕರೆನ್ಸಿ ಟ್ರೇಡರ್ ಆಗಿದ್ದ ಜಾನ್ ಇತ್ತೀಚೆಗಷ್ಟೇ ಪ್ರಧಾನಮಂತ್ರಿಯಾಗಿ ತಮ್ಮ ಎಂಟನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸೆಂಟರ್-ರೈಲ್ ನ್ಯಾಷನಲ್ ಪಾರ್ಟಿಯ ನಾಯಕರಾಗಿ 10ನೇ ವರ್ಷದ ಸಂಭ್ರಮದಲ್ಲಿದ್ದರು. ಜಾನ್ ರಾಜೀನಾಮೆಯಿಂದಾಗಿ ಮುಂದಿನ ವಾರ ಅವರ ಉತ್ತರಾಧಿಕಾರಿ ಆಯ್ಕೆ ನಡೆಯಲಿದೆ. ಉಪ ಪ್ರಧಾನಮಂತ್ರಿ ಬಿಲ್ ಇಂಗ್ಲಿಷ್ ಬಡ್ತಿ ಪಡೆಯುವುದು ಬಹುತೇಕ ಖಚಿತವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin