ನ್ಯೂಯಾರ್ಕ್ನಲ್ಲಿ ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿ ನಿಗೂಢ ಸಾವು
ನ್ಯೂಯಾರ್ಕ್, ಮೇ 20-ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ಇದರೊಂದಿಗೆ ಅಮೆರಿಕದಲ್ಲಿ ಭಾರತೀಯರು ನಾಪತ್ತೆಯಾಗುವ ಮತ್ತು ಸಂಶಯಾಸ್ಪದ ರೀತಿಯಲ್ಲಿ ಮೃತಪಡುವ ಯುವಕರ ಸರಣಿ ಪ್ರಕರಣಗಳು ಮುಂದುವರಿದಿವೆ.
ಕಾರ್ನೆಲ್ನ ಕಾಲೇಜ್ ಆಫ್ ಎಂಜಿನಿಯರಿಂಗ್ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿ ಆಲಾಪ್ ನರಸೀಪುರ (20) ಮೃತಪಟ್ಟ ದುರ್ದೆವಿ. ಕಳೆದ ಬುಧವಾರದಿಂದ ಅಲಾಪ್ ನಾಪತ್ತೆಯಾಗಿದ್ದರು. ಅವರ ಮೃತದೇಹ ನಿನ್ನೆ ಇಥಾಕಾ ಫಾಲ್ಸ್ ಬಳಿ ಇರುವ ಫಾಲ್ ಕ್ರೀಕ್ ಪ್ರದೇಶದಲ್ಲಿ ಪತ್ತೆಯಾಗಿದೆ.
ಆಲಾಪ್ ನಾಪತ್ತೆಯಾದ ನಂತರ ಇಥಾಕ ಪೊಲೀಸ್ ಇಲಾಖೆ ಜೊತೆ ಕಾರ್ನೆಲ್ಸ್ ಯೂನಿವರ್ಸಿಟಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದರು.
ಆಲಾಪ್ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ವಿದ್ಯಾರ್ಥಿಯ ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತನಿಖೆ ಮುಂದುವರಿದಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS