ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 29 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Newyork

ನ್ಯೂಯಾರ್ಕ್, ಸೆ.18-ಭಾರೀ ಸ್ಪೋಟದಿಂದ ಮತ್ತೆ ನ್ಯೂಯಾರ್ಕ್ ನಗರ ಬೆಚ್ಚಿ ಬಿದ್ದಿದೆ. ಗಗನಚುಂಬಿ ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಟ 29 ಮಂದಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ಉನ್ನತಮಟ್ಟದ ಸರ್ವ ಸದಸ್ಯರ ಅಧಿವೇಶನಕ್ಕಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ವಿಶ್ವದ ಅನೇಕ ನಾಯಕರ ಆಗಮನಕ್ಕೆ ಮುನ್ನವೇ ಈ ಸ್ಪೋಟ ಸಂಭವಿಸಿರುವುದರಿಂದ ಭಾರೀ ಆತಂಕ ಉಂಟಾಗಿದೆ. ನ್ಯೂಜೆರ್ಸಿಯ ಚೆಲ್‍ಸಿಯಾ ಪಟ್ಟಣದ 23ನೇ ರಸ್ತೆ ಮತ್ತು 6ನೇ ಅವಿನ್ಯೂದಲ್ಲಿ ನಿನ್ನೆ ಪೈಪ್ ಬಾಂಬ್ ಸ್ಪೋಟಗೊಂಡು ತಲ್ಲಣ ಉಂಟಾದ ಬೆನ್ನಲ್ಲೆ ನ್ಯೂಯಾರ್ಕ್ ನಗರದಲ್ಲಿ ಈ ಆಸ್ಫೋಟ ಸಂಭವಿಸಿದೆ.

ಅಮೆರಿಕ ಅಧ್ಯಕ್ಷ ಬಬಾಮ ಅವರಿಗೆ ಸ್ಪೋಟದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.  ಸ್ಫೋಟದಲ್ಲಿ 29 ಮಂದಿ ಗಾಯಗೊಂಡಿದ್ದಾರೆ. ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಯಾವುದೇ ಸಾವಿನ ಆತಂಕವಿಲ್ಲ. ಇದೊಂದು ಉದ್ದೇಶಿತ ಕೃತ್ಯವಾಗಿದ್ದು, ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳು ಇಲ್ಲ ಎಂದು ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡಿ ಬ್ಲಾಸಿಯೋ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.  ಇದೊಂದು ತುಂಬಾ ಗಂಭೀರ ಪ್ರಕರಣವಾಗಿದ್ದರೂ, ಅತಂಕಪಡುವ ಅಗತ್ಯವಿಲ್ಲ. ಯಾವುದೇ ಉಗ್ರಗಾಮಿ ಸಂಘಟನೆಯ ಬೆದರಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

new  york

new  york.jpg 2

new  york.jpg1

 

► Follow us on –  Facebook / Twitter  / Google+

Facebook Comments

Sri Raghav

Admin