ನ್ಯೂಯಾರ್ಕ್ ಪಾರ್ಕ್ನ ನಲ್ಲಿ ಬೆತ್ತಲಾದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

trump

ನ್ಯೂಯಾರ್ಕ್ ಆ.19 : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪೂರ್ಣ ನಗ್ನ ರೂಪದ ಪ್ರತಿಮೆ ನ್ಯೂಯಾರ್ಕ್ ನಗರದ ಪಾರ್ಕ್ ನಲ್ಲಿ ತಲೆ ಎತ್ತಿದ್ದು, ವಿಗ್ರಹದ ಬಳಿ ನಿಂತು ನೂರಾರು ಮಂದಿ ಸೆಲ್ಫೆ ತೆಗೆದುಕೊಳ್ಳುತ್ತಿದ್ದಾರೆ. ನ್ಯೂಯಾರ್ಕ್ ಮ್ಯಾನ್ ಹಟನ್ ನಲ್ಲಿ ಯೂನಿಯನ್ ಪಾರ್ಕ್ ನಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, “ದ ಎಂಪರರ್ ಹ್ಯಾಸ್ ನೋ ಬಾಲ್ಸ್” ಎಂಬ ಅಡಿಬರಹ ಹೊಂದಿದ್ದ ವಿಗ್ರಹ ಇದೀಗ ವಿವಾದಕ್ಕೀಡಾಗಿದೆ. ಟ್ರಂಪ್ರ ದ್ವೇಷಪೂರಿತ ಭಾಷಣವನ್ನು ಸಂಘಟನೆ ಈರೀತಿ ಪ್ರತಿಭಟಿಸುತ್ತಿದೆ. ನಗ್ನವಾಗಿರುವ ಈ ವಿಗ್ರಹದಲ್ಲಿ ಗುಪ್ತಾಂಗವೇ ಇಲ್ಲದಂತೆ ಬಿಂಬಿಸಲಾಗಿದ್ದು, ನ್ಯೂಯಾರ್ಕ್ ನಲ್ಲಿ ಈ ವಿಗ್ರಹ ತೀವ್ರ ವಿವಾದಕ್ಕೀಡಾಗಿದೆ. ಕೆಲವರು ಈ ವಿಗ್ರಹದ ಬಳಿ ಬಂದಿ ಸೆಲ್ಫೆ ತೆಗೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಈ ವಿಗ್ರಹವನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಟ್ರಂಪ್ ವಿರೋಧಿಗಳಂತೂ ಈ ವಿಗ್ರಹವನ್ನು ಅವರ ಅಧಿಕಾರಕ್ಕೆ ಹೋಲಿಕೆ ಮಾಡುತ್ತಿದ್ದು, ಇದಕ್ಕೆ ಟ್ರಂಪ್ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಟ್ರಂಪ್ “ಪ್ಯಾಶಿಸಂನ ಹೊಸ ಚಕ್ರವರ್ತಿ” ಎಂದು ಪ್ರತಿಭಟನಕಾರರು ಹೇಳಿದ್ದಾರೆ.ತಮ್ಮ ಪ್ರತಿಭಟನೆ ಟ್ರಂಪ್ರನ್ನು ಅಧ್ಯಕ್ಷ ಸ್ಥಾನದಿಂದ ತಡೆಯಲು ಸಮರ್ಥವಾಗಬಹುದು ಎಂದು ಪ್ರತಿಭಟನಾಕಾರರ ಆಶಾವಾದವಾಗಿದೆ ಎಂದು ವರದಿ ತಿಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin