ನ.13 ಮತ್ತು 14 ರಂದು ಸೂಪರ್‍ಮೂನ್ ದರ್ಶನ : ಅಪತ್ತಿನ ಅಭಯ ನೀಡಿದ ನಾಸಾ

ಈ ಸುದ್ದಿಯನ್ನು ಶೇರ್ ಮಾಡಿ

Supper-Moon-1

ನವದೆಹಲಿ, ನ.5– ಬಾನಂಗಳದಲ್ಲಿ ಇದೇ ತಿಂಗಳ 13 ಮತ್ತು 14ರಂದು ವಿಸ್ಮಯ ವಿದ್ಯಮಾನವೊಂದು ನಡೆಯಲಿದೆ. ಅತ್ಯಂತ ದೊಡ್ಡ, ಅತಿ ಉಜ್ವಲ ಮತ್ತು ತೀರಾ ಸನಿಹದ ಚಂದ್ರನನ್ನು ನೋಡುವ ಅವಕಾಶ ಜನರಿಗೆ ಲಭಿಸಲಿದೆ. ಜನವರಿ 26, 1948ರಲ್ಲಿ ಅಂದರೆ 68 ವರ್ಷಗಳ ಹಿಂದೆ ಇಂಥ ಸೌರವ್ಯೂಹ ಅದ್ಭುತಕ್ಕೆ ಆಗಸವು ಸಾಕ್ಷಿಯಾಗಿತ್ತು. ಈ ಶತಮಾನದ ಸೂಪರ್‍ಮೂನ್ ಎಂದೇ ಇದನ್ನು ಬಣ್ಣಿಸಲಾಗಿದೆ.  ಇದೇ ವೇಳೆ, ಈ ಸೂಪರ್‍ಮೂನ್ ಗೋಚರಿಸುವುದು ಜಗತ್ತಿನ ಅಪತ್ತಿಗೆ ಮುನ್ಸೂಚನೆ ಎಂಬ ಆತಂಕವೂ ಸೃಷ್ಟಿಯಾಗಿದೆ. ಆದರೆ ಈ ವರದಿಗಳನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ತಳ್ಳಿ ಹಾಕಿದೆ.

ನ.13 ಮತ್ತು 14ರಂದು ಚಂದ್ರಮನು ಮಾಮೂಲಿಗಿಂತ 14 ಪಟ್ಟು ದೊಡ್ಡದಾಗಿ ಕಾಣಿಸಿಕೊಂಡು, ಬೆಳದಿಂಗಳಿಗಿಂತ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಬೆಳಗಲಿದ್ದಾನೆ. ಅಲ್ಲದೇ ಭೂಮಿಗೆ ಅತ್ಯಂತ ಸಮೀಪಕ್ಕೆ (48,000 ಕಿ.ಮೀ. ¸ನಿಹ) ಬರಲಿದ್ದಾನೆ. ಈ ಮೂರು ಅದ್ಭುತ ಸಂಗತಿಗಳು ಅಂದೇ ಘಟಿಸಲಿರುವುದು ಅತ್ಯಂತ ಸೋಜಿಗದ ಸಂಗತಿಯೂ ಹೌದು.
ಜಗತ್ತಿನ ಎಲ್ಲ ಭಾಗಗಳಲ್ಲೂ ಶಶಾಂಕ ಎಂದಿಗಿಂತ ವಿಭಿನ್ನ ರೀತಿಯಲ್ಲಿ ಗೋಚರಿಸಿದರೂ, ಪೂರ್ವ, ಉತ್ತರ ಅಮೆರಿಕ ಮತ್ತು ಯುರೋಪ್ ಖಂಡದ ಕೆಲವು ಭಾಗದಲ್ಲಿ ತುಂಬಾ ಸ್ಪಷ್ಟವಾಗಿ ಕಾಣಿಸಲಿದ್ದಾನೆ.

ಇದನ್ನು 21ನೇ ಶತಮಾನದ ಅತ್ಯಂತ ವಿಶಿಷ್ಟ ತಾರಾಮಂಡಲದ ವಿಸ್ಮಯ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಬಣ್ಣಿಸಿದ್ದು, ಈ ಅಪರೂಪದ ದೃಶ್ಯವನ್ನು ಮತ್ತೆ ನೋಡಬೇಕಾದರೆ ನವೆಂಬರ್ 25, 2034ರವರೆಗೆ ಕಾಯಬೇಕು ಎಂದು ಹೇಳಿದ್ದಾರೆ.  ಈ ನಯನಮನೋಹರ ದೃಶ್ಯಗಳನ್ನು ಸೆರೆ ಹಿಡಿಯಲು ಸಾವಿರಾರು ಅತ್ಯಾಧುನಿಕ ಕ್ಯಾಮೆರಾಗಳನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಸಜ್ಜುಗೊಳಿಸಲಾಗಿದೆ.

ಗಂಡಾಂತರದ ಮುನ್ಸೂಚನೆಯೇ ?:

Supper-Moon-2

68 ವರ್ಷಗಳ ಬಳಿಕ ಘಟಿಸಲಿರುವ ಸೂಪರ್‍ಮೂನ್ ವಿದ್ಯಮಾನದ ಬಗ್ಗೆ ವಿಶ್ವದ ಕೆಲವೆಡೆ ಆತಂಕ ಉಂಟಾಗಿದೆ. ಜಗತ್ತಿಗೆ ಗಂಡಾಂತರ ಉಂಟು ಮಾಡುವ ಹಾಗೂ ಸುನಾಮಿಯಂಥ ನೈಸರ್ಗಿಕ ಪ್ರಕೋಪಗಳು ಬಂದೆರಗುವುದ ಮುನ್ಸೂಚನೆ ಇದಾಗಿದೆ ಎಂದು ಕೆಲವು ಬಣಗಳು ವಾದಿಸುತ್ತಿವೆ.  ಆದರೆ, ಈ ವರದಿ ಮತ್ತು ಆತಂಕಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೊಂದು ತೀರಾ ಅಪರೂಪದ ವಿದ್ಯಮಾನ. ಇದು ಕತ್ತಲು ಬೆಳಕಿನಾಟದ ಸಂಗತಿ. ಗುರುತ್ವಾಕರ್ಷಣೆಯಲ್ಲಿ ಸ್ವಲ್ಪ ಏರುಪೇರಾಗುವುದು ಸಹಜ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ವಿವರಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin