ನ.8ರಂದು ಬ್ರಿಟನ್ ಪ್ರಧಾನಿ ಬೆಂಗಳೂರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Theresa-british-PM

ಬೆಂಗಳೂರು, ನ.6– ಬ್ರಿಟನ್ ಪ್ರಧಾನಮಂತ್ರಿ ತೆರೇಸಾ ಮೇ ಇಂದಿನಿಂದ ಮೂರು ದಿನಗಳ ಭಾರತ ಭೇಟಿ ಆರಂಭಿಸಲಿದ್ದು, ನ.8ರಂದು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೇ ಅವರೊಂದಿಗೆ ಬ್ರಿಟನ್ ನಿಯೋಗವೂ ಪಾಲ್ಗೊಳ್ಳುವುದರಿಂದ ಉದ್ಯಾನನಗರಿಯಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.  ತೆರೇಸಾ ಮೇ ಮಂಗಳವಾರ ಬೆಂಗಳೂರಿನಲ್ಲಿ ಐದಕ್ಕೂ ಹೆಚ್ಚು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬೆಳಿಗ್ಗೆ 11ಕ್ಕೆ ನಗರಕ್ಕೆ ಆಗಮಿಸುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಚರ್ಚೆ ನಡೆಸುವರು. ನಂತರ ಪಾಪನಹಳ್ಳಿ ಬಳಿ ಇರುವ ಸ್ಟೋನ್ ಹಿಲ್ ಮಾಡೆಲ್ ಸ್ಕೂಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸುವರು.

ತರುವಾಯ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ವೈಮಾಂತರಿಕ್ಷ ಸಂಸ್ಥೆ ಡೈನಾಮಿಕ್ಸ್ ಟೆಕ್ನಾಲಜೀಸ್ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸುವರು.
ಪೀಣ್ಯದಿಂದ ನೇರವಾಗಿ ಹಲಸೂರಿನ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವರು. ಬಳಿಕ ಇಂಡಿಯಾ ಇಂಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆ ವಾಣಿಜ್ಯೋದ್ಯಮ ಒಪ್ಪಂದಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಅದೇ ದಿನ ಸಂಜೆ ಬೆಂಗಳೂರಿನಿಂದ ಲಂಡನ್ಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ರಿಟನ್ ಪ್ರಧಾನಿ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆ ಮಾರ್ಪಾಡು ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin