ನ.8ರಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಬಿಸಿಯೂಟ

ಈ ಸುದ್ದಿಯನ್ನು ಶೇರ್ ಮಾಡಿ

BBMP-Workers

ಬೆಂಗಳೂರು,ಅ.28-ನವೆಂಬರ್ 8ರಿಂದ ನಗರದ ಪೌರಕಾರ್ಮಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಬಿಸಿಯೂಟದ ಯೋಜನೆಯನ್ನು ಆರಂಭಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ ಸಭೆಯಲ್ಲಿಂದು ಘೋಷಣೆ ಮಾಡಿದರು.  ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಸಾವಿರ ಪೌರಕಾರ್ಮಿಕರಿದ್ದಾರೆ. ಅವರೆಲ್ಲರಿಗೂ ನ.8ರಿಂದ ಬಿಸಿಯೂಟ ನೀಡಲಾಗುವುದು. ಅದಕ್ಕಾಗಿ ಬಜೆಟ್‍ನಲ್ಲಿ 10 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.  ನ.8ರಂದು ಒಂದು ವಲಯದಲ್ಲಿ ಬಿಸಿಯೂಟ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರುತ್ತೇವೆ. ನಂತರ ಪ್ರತಿನಿತ್ಯ ಒಂದೊಂದು ವಲಯಕ್ಕೂ ವಿಸ್ತರಿಸಲಾಗುತ್ತದೆ. ಒಟ್ಟಾರೆ ಎಲ್ಲ 25 ಸಾವಿರ ಪೌರಕಾರ್ಮಿಕರಿಗೂ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಅದೇ ರೀತಿ ಒಂದೊಂದು ವಾರ್ಡ್‍ನಲ್ಲಿ 50 ಮಂದಿ ಹಿರಿಯ ನಾಗರಿಕರನ್ನು ಗುರುತಿಸಿ ಎಲ್ಲ 198 ವಾರ್ಡ್‍ಗಳನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಬಿಸಿಯೂಟ ಯೋಜನೆಯನ್ನು ಪುನರಾರಂಭಿಸಲಾಗುವುದು. ಈ ಯೋಜನೆಗಾಗಿ ಪಾಲಿಕೆ ಬಜೆಟ್‍ನಲ್ಲಿ ನಾಲ್ಕು ಕೋಟಿ ಹಣ ವಿಸ್ತರಿಸಲಾಗಿದೆ ಎಂದು ಹೇಳಿದರು.  ಆಹಾರ ಸಚಿವ ಯು.ಟಿ.ಖಾದರ್ ಮಾತನಾಡಿ, ಬಸ್ ನಿಲ್ದಾಣಗಳಲ್ಲಿ ವಾಹನ ಸಿಗದೆ ಅಲ್ಲೇ ಉಳಿದುಕೊಳ್ಳುವ ಪ್ರಯಾಣಿಕರಿಗೂ ಬಿಸಿಯೂಟ ಯೋಜನೆಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಒಂದು ಊಟಕ್ಕೆ ತಲಾ 10 ರೂ. ನೀಡಲಿದೆ. ಇದರ ಜತೆಗೆ ಬಿಬಿಎಂಪಿ 10 ರೂ. ಸೇರಿಸಿ ಅವರಿಗೂ ಬಿಸಿಯೂಟ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin