ನ.8 ರಿಂದ ಡಿ.30ರ ವರೆಗಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿಡುವಂತೆ ಬ್ಯಾಂಕ್‍ಗಳಿಗೆ ಆರ್’ಬಿಐ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

RBI

ಮುಂಬೈ ಡಿ.13 : ನವೆಂಬರ್ 8 ರಿಂದ ಡಿಸೆಂಬರ್ 30ರವರೆಗಿನ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ಎಲ್ಲಾ ಬ್ಯಾಂಕ್ ಗಳಿಗೂ ರಿಸರ್ವ್ ಬ್ಯಾಂಕ್ ಆಫ್ ಸೂಚನೆ ನೀಡಿದೆ. ಕಾಳಧನಿಕರಿಗೆ ಬ್ಯಾಂಕಿನವರರೇ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೇಶಾದ್ಯಂತ ನೋಟು ನಿಷೇಧ ಬಳಿಕ ನಡೆದ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ಆರ್ ಬಿಐ ಸೂಚಿಸಿದ್ದು, ತಾನು ಯಾವಾಗ ಬೇಕಾದರೂ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಬ್ಯಾಂಕ್ ಗಳಿಗೆ ಹೇಳಿದೆ.

ಅಕ್ಟೋಬರ್ 27 ಅಪೆಕ್ಸ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳ ಬ್ಯಾಂಕಿಂಗ್ ಹಾಲ್, ಕೌಂಟರ್ ಮತ್ತು ಎಲ್ಲಾ ಜಾಗಗಳಲ್ಲಿಯೂ ಸಿಸಿಟಿವಿಯನ್ನು ಅಳವಡಿಸುವಂತೆ ಸೂಚಿಸಿತ್ತು.

Facebook Comments

Sri Raghav

Admin