ಪಂಕಜ್ ಆಡ್ವಾಣಿಗೆ 16ನೇ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಕಿರೀಟ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು ಡಿ.13: ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾದ ಪಂಕಜ್ ಆಡ್ವಾಣಿ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ (ಅಂಕ ಮಾದರಿ) ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ. ಲಾಂಗ್ ಫಾರ್ವಟ್ನಲ್ಲಿ ತವರು ಪ್ರೇಕ್ಷಕರ ಎದುರೇ ಕ್ವಾರ್ಟರ್ಫೈನಲ್ನಲ್ಲಿ ಮುಗ್ಗರಿಸಿದ್ದ ಪಂಕಜ್ ಆಡ್ವಾಣಿ ಅಂಕ ಮಾದರಿಯ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಉಳಿಸಿಕೊಂಡರು. ಈ ಮೂಲಕ ಪಂಕಜ್ ವೃತ್ತಿಜೀವನದಲ್ಲಿ 16ನೇ ಬಾರಿಗೆ ವಿಶ್ವ ಕಿರೀಟ ಜಯಿಸಿದರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments