ಪಂಚಮಸಾಲಿ ಸಮಾಜವನ್ನು ಓಬಿಸಿಗೆ ಸೇರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

belgam-5

ಹುನಗುಂದ,ಆ.29- ಪಂಚಮಸಾಲಿ ಸಮಾಜವು ರಾಜ್ಯದ ಇತರ ಸಮಾಜ ಗಳಿಗಿಂತಲೂ ಆರ್ಥಿಕ, ಸಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದೆ. ಸರ್ಕಾರ ಕಳೆದ ವರ್ಷ ನಡೆಸಿದ ಜಾತಿ ಗಣತೆಯಲ್ಲಿ ಪಂಚಮಸಾಲಿ ಜನಾಂಗ 80 ಲಕ್ಷ ಜನರಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಮತ್ತೆ ಸಮೀಕ್ಷೆ ಮಾಡಿ ಯಾರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆಯೂ ಅಂತಹ ಜನಾಂಗಕ್ಕೆ ಮೀಸಲಾತಿಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಮತ್ತು ಓಬಿಸಿಗೆ ಮೀಸಲಾತಿಗೆ ಒಳಪಡಿಸ ಬೇಕು ಎಂದು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಅವರು ತಾಲೂಕಿನ ಸುಕ್ಷೇತ್ರ ಕೂಡಲಸಂಗಮದ ಬಸವ ವೇದಿಕೆಯಲ್ಲಿ ಲಿಂಗಾಯತ ಪಂಚಮಸಾಲಿ ಮಹಾಪೀಠ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ಸಹಯೋಗದೊಂದಿಗೆ ನಡೆದ 7ನೆ ಬಸವಪಂಚಮಿ ಕಾರ್ಯಕ್ರಮವನ್ನು ಬಸವಣ್ಣನವರ ಮೂರ್ತಿಗೆ ಪುಷ್ಪ ಸಮರ್ಪಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.ಪಂಚಮಸಾಲಿ ಸಮಾಜ ಇಷ್ಟು ಪ್ರಭಾವ ಹೊಂದಿದ್ದರೂ ಇಂದಿನ ಕ್ಯಾಬಿನಟ್‍ನಲ್ಲಿ ಪಂಚಮಸಾಲಿ ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಸಿಗದಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.

ನಂತರ ಪಂಚಮಸಾಲಿ ಮಹಾಪೀಠದ ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ ರಾಜ್ಯದ ಇತರ ಸಮಾಜಗಳು ಸಂಘಟಿತರಾಗಿದ್ದಾರೆ. ಆದರೆ ನಮ್ಮ ಸಮಾಜ ಹಿಂದುಳಿದಿದೆ, ನಾವೆಲ್ಲರೂ ಸಂಘಟಿತರಾಗಬೇಕಾಗಿದೆ, ಪಂಚಮಿ ಎನ್ನುವ ಪದವು ಪಂಚಮಸಾಲಿ ಎಂಬು ವುದರಿಂದ ಉದ್ಬವವಾದುದು, ಐದು ದೊಡ್ಡ ಧಾನ್ಯಗಳನ್ನು ಬೆಳೆಯುವ ಮಹಾನ ಸಮಾಜವಾದ ಪಂಚಮಸಾಲಿ ಸಮಾಜದಿಂದ ಬಂದಿದೆ, ಧಾರ್ಮಿಕ ಶಕ್ತಿಯನ್ನು ಸದೃಢವಾಗಿ ಮೈಗೂಡಿಸಿಕೊಂಡ ಏಕೈಕ ಸಮಾಜವೇ ನಮ್ಮದು, ಎಲ್ಲ ಸಮಾಜದವರಗಿಂತ ಧಾರ್ಮಿಕ ಪರಂಪರೆಯನ್ನು ಹೊಂದಿದ

ಸಮಾಜವಾಗಿದೆ, ಬಸವಣ್ಣನವರ ಐಕ್ಯವಾದ ದಿನದಂದು ಪ್ರತಿ ವರ್ಷ ಈ ಬಸವ ಪಂಚಮಿಯ ಕಾರ್ಯಕ್ರಮವನ್ನು ಆಚರಿಸುತ್ತಾ ಬಂದಿದ್ದೇವೆ, ಪಂಚಮಸಾಲಿ ಸಮಾಜ ನಡೆದಿದ್ದೆ ಮಾರ್ಗ ಇದು ಸಂಘಟಿತರಾಗಿ ಉಳಿದ ಶೋಷಿತ ಸಮಾಜವನ್ನು ಕರೆದುಕೊಂಡು ಹೋಗಬೇಕಾಗಿದೆ, ಇಂತಹ ಪ್ರಭಾವಿ ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಕೇಂದ್ರದ ಓಬಿಸಿ ಮೀಸಲಾತಿಯಲ್ಲಿ ಮತ್ತು ರಾಜ್ಯದ 2ಎ ಮೀಸಲಾತಿಯಲ್ಲಿ ಸೇರಿಸುವಂತೆ ಬಹುದಿನಗಳ ಬೇಡಿಕೆಯಿದೆ ಎಂದರು.  ಆದರೇ ಅದು ಇವರಿಗೂ ಸಾಧ್ಯವಾಗಿಲ್ಲ, ಅದಕ್ಕಾಗಿ ಸಮಾಜ ಪ್ರಭಾವಿ ವ್ಯಕ್ತಿಗಳು ಮತ್ತು ವಿವಿಧ ಪಕ್ಷದಲ್ಲಿರುವ ರಾಜಕೀಯ ಮುಖಂಡರ ನಿಯೋಗವನ್ನು ತಗೆದುಕೊಂಡು ಹೋಗಿ ಕೇಂದ್ರದ ಪ್ರಧಾನಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ನಮ್ಮ ಸಮಾಜವನ್ನು 2ಎ ಇಲ್ಲವೇ ಓಬಿಸಿ ಮೀಸಲಾತಿ ಕೊಡುವಂತೆ ಒತ್ತಾಯ ಮತ್ತು ಗಡವು ನೀಡತ್ತೇವೆ. ಒಂದು ವೇಳೆ ಕೊಡದಿದ್ದರೇ ನಮ್ಮ ಹಕ್ಕುಗಳಿಗಾಗಿ ಬೆಂಗಳೂರ ಅಥವಾ ಕಿತ್ತೂರಗಳಲ್ಲಿ ದೊಡ್ಡ ಸಮಾವೇಶ ಮಾಡುವುದರ ಮೂಲಕ ನಮ್ಮ ಸಮಾಜದ ಶಕ್ತಿ ಏನಿದೇ ಎಂದು ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಇದೊಂದು ಐತಿಹಾಸಿಕ ಸಮಾರಂಭವಾಗಿದ್ದು ಈ ವೇದಿಕೆಯಲ್ಲಿಯೇ ಸ್ವಾತಂತ್ರ ಹೋರಾಟಗಾರ ಅಣ್ಣ ಹಜಾರೆ, ಅಬ್ದುಲ್ ಕಲಾಂ, ರಾಜಸಿಂಗ್ ಮತ್ತು ಮೇಧಾ ಪಾಟ್ಕರ್‍ರಂತವರನ್ನು ಗುರುತಿಸಿ ಸತ್ಕರಿಸಿದ ವೇದಿಕೆಯಾಗಿದೆ, ನಮ್ಮ ಸಮಾಜ ಎರಡು ಪೀಠಗಳಿಂದ ಒಡೆದು ಹೋಗಿ ಅಸಂಘಟಿತರಾಗಿತ್ತು. ಆದರೆ ಹರಿಹರ ಪೀಠದಲ್ಲಿ 27 ಕೋಟಿ ಹಗರಣದಿಂದ ಇಂದು ಆಡಳಿತ್ಮಾಕ ಅಧಿಕಾರಿಯನ್ನು ನೇಮಕ ಮಾಡುವ ಪರಸ್ಥಿತಿ ಬಂದಿದೆ, ಹೊಡೆದು ಎರಡು ಭಾಗವಾಗಿದ್ದ ಪಂಚಮಸಾಲಿ ಪೀಠ ಇಂದು ಒಂದೇ ಮೂಲ ಪೀಠದಲ್ಲಿ ಒಂದಾಗಿದೆ. ನಮ್ಮ ಸರ್ಕಾರದಿಂದ ನೆಲಮಂಗಲದಲ್ಲಿ 5 ಎಕರೆ ಜಮೀನು ನೀಡಿದ್ದು ಅದರಲ್ಲಿಯೇ ಭವ್ಯವಾದ ಮಠ ಮತ್ತು ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಲಾಗುವುದು.

ಕೂಡಲಸಂಗಮದ ಪಂಚಮಸಾಲಿ ಮಠವು ಅಪೂರ್ಣವಾಗಿದ್ದು 2018ರ ವೇಳೆಗೆ ಪೂರ್ಣಗೊಳಿಸಲಾಗು ವುದು, ಅಖಂಡ ವಿಜಯಪುರ ಜಿಲ್ಲೆಯನ್ನು ನೀರಾವರಿ ಮಾಡುವುದೆ ನಮ್ಮ ಮುಂದಿನ ಗುರಿಯಾಗಿದೆ, ಏಷ್ಯಾ ಖಂಡದಲ್ಲಿಯೇ ಮೊದಲ ಹನಿ ನೀರಾವರಿಯನ್ನು ಹೊಂದಿದ ಏಕೈಕ ತಾಲೂಕು ಹುನಗುಂದ ತಾಲೂಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಮತ್ತು ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರನ್ನು ಹಾಗೂ ಶೇ. 95ಗಿಂತ ಹೆಚ್ಚು ಅಂಕ ಗಳಿಸಿದ ರಾಜ್ಯದಮಟ್ಟದ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮತ್ತು ಪಿ.ಹೆಚ್.ಡಿ ಪಡೆದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin