ಪಂಚರಾಜ್ಯ ಚುನಾವಣೆ ಗೆಲುವು : ಪ್ರಧಾನಿ ಮೋದಿಗೆ ಫೋನ್ ಮಾಡಿ ಅಭಿನಂದಿಸಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Modi-and-Trump

ನವದೆಹಲಿ, ಮಾ.28– ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ಡೊನಾಲ್ಡ್ ಟ್ರಂಪ್ ನಿನ್ನೆ ಸಂಜೆ ಕರೆ ಮಾಡಿದ್ದಾರೆ.  ಉಭಯ ಕುಶಲೋಪರಿ ವಿಚಾರಿಸಿ ಪರಸ್ಪರ ಭೇಟಿಗೆ ಆಹ್ವಾನ ನೀಡಿದ್ದಾರೆ. 3ನೆ ಬಾರಿಗೆ ಮೋದಿ ಟ್ರಂಪ್ ದೂರವಾಣಿಯಲ್ಲಿ ಮಾತನಾಡಿಕೊಂಡಿದ್ದಾರೆ. ಟ್ರಂಪ್ ಅಮೆರಿಕ ಅಧ್ಯಕ್ಷರಾದ ಸಂದರ್ಭದಲ್ಲಿ ಮೋದಿ ಅಭಿನಂದಿಸಿದ್ದರು.

ಜನವರಿ 20 ರಂದು ಟ್ರಂಪ್ ಕರೆ ಮಾಡಿ ಭದ್ರತಾ ವಿಷಯಗಳ ಕುರಿತಾಗಿ ಚರ್ಚೆ ನಡೆಸಿದ್ದರು.ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಗಳಿಸಿದ್ದಕ್ಕೆ ಟ್ರಂಪ್ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.  ಅಧ್ಯಕ್ಷರು ಉಭಯ ಮುಖಂಡರಿಗೆ ಕರೆ ಮಾಡಿ, ಚುನಾವಣಾ ಜಯಕ್ಕಾಗಿ ಅಭಿನಂದಿಸಿದ್ದಾರೆ ಎಂದು ಸ್ಪೆಸರ್ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉತ್ತರ ಪ್ರದೇಶ, ಉತ್ತರಾಖಂಡ, ಗೊವಾ ಹಾಗೂ ಮಣಿಪುರದಲ್ಲಿ ಅಧಿಕಾರ ಹಿಡಿದಿದ್ದರೆ, ಪಂಜಾಬ್‍ನಲ್ಲಿ ಸೋಲು ಅನುಭವಿಸಿದೆ. ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಬಳಿಕ ನಡೆದ ಮೊದಲ ಚುನಾವಣೆಯನ್ನು ಕೇಂದ್ರದ ಪಾಲಿನ ಜನ ಮತಗಣನೆ ಎಂದೇ ವಿಶ್ಲೇಷಿಸಲಾಗಿತ್ತು.

ಇದಕ್ಕೂ ಮುನ್ನ ಟ್ರಂಪ್ ಹಾಗೂ ಮೋದಿ ಜನವರಿ 24ರಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟ, ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಉಭಯ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ಈ ಮಾತುಕತೆ ವೇಳೆ ಉಭಯ ಗಣ್ಯರು ನಿರ್ಧರಿಸಿದ್ದರು. ವಿಶ್ವದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತವನ್ನು ನೈಜ ಸ್ನೇಹಿತ ಎಂದು ಅಮೆರಿಕ ಪರಿಗಣಿಸುತ್ತದೆ ಎಂದು ಶ್ವೇತ ಭವನದ ಮೂಲಗಳು ಹೇಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin