ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ, ಭಾರೀ ಬೆಟ್ಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Betting--01

ನವದೆಹಲಿ, ಮಾ.9– ದೇಶದ ಜನತೆ ಕೂತುಹಲದಿಂದ ಎದುರು ನೋಡುತ್ತಿರುವ ಪಂಚರಾಜ್ಯಗಳ ವಿಧಾನಸಭೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಭರ್ಜರಿ ಬೆಟ್ಟಿಂಗ್ ಶುರುವಾಗಿದೆ.  ಒಂದು ಮೂಲದ ಪ್ರಕಾರ ಪಂಟರ್ಸ್‍ಗಳು ಸುಮಾರು 3ರಿಂದ 5ಸಾವಿರ ಕೋಟಿವರೆಗೂ ಬೆಟ್ಟಿಂಗ್ ಮಾಡಿದ್ದು, ಬಿಜೆಪಿ ಮೇಲೆ ಹೆಚ್ಚಿನ ಹಣ ಹೂಡಿದ್ದಾರೆ.   ರಾಷ್ಟ್ರರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಪಣಜಿ, ಚಂಢೀಗಡ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆದಿದೆ. ವಿಶೇಷವಾಗಿ ದೇಶದ ಅತಿ ದೊಡ್ಡ ರಾಜ್ಯದ ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಮೇಲೆ ಎಂಬುದರ ಹೆಚ್ಚಿನ ಹಣ ಹೂಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆಯೇ ? ಮತದಾರರಿಗೆ ಮೋದಿ ಮೋಡಿ ಮಾಡಲಿದೆಯೇ ? ಎರಡನೇ ಬಾರಿಗೆ ಎಸ್‍ಪಿ ಅಧಿಕಾರ ಹಿಡಿಯಲಿದೆಯೇ ? ಇಲ್ಲವೇ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಮಾಯವತಿಗೆ ಅದೃಷ್ಟ ಖುಲಾಯಿಸಲಿದೆಯೇ ಎಂಬುದರ ಮೇಲೆಯೂ ಬೆಟ್ಟಿಂಗ್ ಮಾಡಲಾಗಿದೆ.

ಕೆಲವರು ಬಿಜೆಪಿ ಸ್ಪಷ್ಟ ಬಹುಮತದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಹಣ ಹೂಡಿದ್ದರೆ. ಇನ್ನೂ ಕೆಲವರು ಅಖಿಲೇಶ್ ಪುನಃ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಭರವಸೆಯಲ್ಲಿ ಬೆಟ್ಟಿಂಗ್ ಮಾಡಿದ್ದಾರೆ.  ಬಿಜೆಪಿ 200ರಿಂದ 225 ಸ್ಥಾನ ಗಳಿಸಲಿದೆ ಎಂದು ಕೆಲವರ ಲೆಕ್ಕಾಚಾರವಾದರೆ ಎಸ್‍ಪಿ 200ರಿಂದ 210 ಸ್ಥಾನಗಳಿಸಿದರೆ ಸರ್ಕಾರ ರಚನೆಯಲ್ಲಿ ಕಿಂಗ್‍ಮೇಕರ್ ಆಗಲಿರುವ ಮಾಯಾವತಿ 120ರಿಂದ 140 ಸ್ಥಾನಗಳಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.  ಇನ್ನೂ ಕೆಲವರು ಯಾವ ಪಕ್ಷಕ್ಕೂ ಸ್ಪಷ್ಟ ಜಾನದೇಶ ಸಿಗದೆ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಕಡೆ ಪಂಟರುಗಳು ದೊಡ್ಡ ಮಟ್ಟದಲ್ಲಿ ಅಂದರೆ 10ರೂ.ಗೆ 4ರಿಂದ 5ರೂ. ಹೂಡಿಕೆಯಾದರೆ, ಎಸ್‍ಪಿ ಪರ 10ರೂ.ಗೆ 2ರಿಂದ 2.50ಪೈಸೆ ಹಾಗೂ ಬಿಎಸ್‍ಪಿ ಪರ 1ರಿಂದ 1.50ಪೈಸೆಗೆ ಬೆಟ್ಟಿಂಗ್ ಮಾಡಲಾಗಿದೆ.  ಅಂತಿಮವಾಗಿ ಯಾರು ಏನೇ ಹೇಳಿದರೂ ಶನಿವಾರ ಪ್ರಕಟಗೊಳ್ಳಲಿರುವ ಫಲಿತಾಂಶದವರೆಗೆ ಇಂತಹ ನಾನಾ ಲೆಕ್ಕಾಚಾರಗಳು ನಡೆಯುತ್ತಲೇ ಇರುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin