ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

hk--patil

ಹಿರಿಯೂರು, ಸೆ.26-ಜಿಲ್ಲೆಯ ಪ್ರತಿ ಹಳ್ಳಿಯ ಮನೆಗಳಿಗೂ ಶೌಚಾಲಯ ಒದಗಿಸುವ ಮಹತ್ವದ ಯೋಜನೆ ರೂಪಿಸಲಾಗಿದ್ದು 1 ಲಕ್ಷ ಶೌಚಾಲಯಗಳನ್ನು ನಿರ್ಮಿಸಲು ಅಕ್ಟೋಬರ್ 2 ರಂದು ಚಾಲನೆ ನೀಡಲಾಗವುದೆಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ಹೇಮದಳ ಗ್ರಾಮದಲ್ಲಿ ಇತ್ತಿಚೆಗೆ ಶೌಚಾಲಯ ನಿರ್ಮಿಸಲು ಒತ್ತಾಯಿಸಿ ನಿರಶನ ನಡೆಸಿದ್ದ 8 ನೇ ತರಗತಿ ಬಾಲಕಿ ಲಾವಣ್ಯ ಮನೆಗೆ ಭೈೀಟಿಯಿತ್ತು ಅಭಿನಂದಿಸಿದ ನಂತರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಶೌಚಾಲಯ ಪ್ರತಿಯೊಬ್ಬರ ಅವಶ್ಯಕತೆ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಹಾಗೂ ಬಯಲು ಮುಕ್ತ ಶೌಚಾಲಯ ವಲಯವನ್ನಾಗಿ ಮಾಡಲು ಎಲ್ಲ ಬಗೆಯ ಸಹಕಾರ ನೀಡಲಾಗುವುದೆಂದರು.

ನಮ್ಮ ಜನರ ಮುಗ್ದತೆಯೋ, ಅಜ್ಞಾನವೋ ಗೊತ್ತಿಲ್ಲ ನಾವು ನಿರೀಕ್ಷಿಸಿದಷ್ಟು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲವೆಂದು ವಿಷಾದಿಸಿದರು.ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಾಸನ ಸಭೆಯಲ್ಲಿ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ವಿಧೇಯಕ ಮಂಡಿಸಿ ಕಾನೂನು ರೂಪಿಸಲಾಗಿದೆ. ಗ್ರಾಮೀಣರ ಬದುಕು ಹಂಗಿನ ಬದುಕು ಆಗದೆ ಹಕ್ಕಿನ ಬದುಕಾಗಬೇಕೆಂಬುದು ಈ ಕಾಯಿದೆಯ ಮೂಲ ಆಶಯ ಈ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದ ಭೌತಿಕ ಮತ್ತು ಆರ್ಥಿಕ ಸ್ವರೂಪದ ಚಿತ್ರಣ ಬದಲಿಸುವ ಎಲ್ಲ ಬಗೆಯ ಯೋಜನೆಗಳನ್ನು ರೂಪಿಸಲಾಗಿದೆಯೆಂದರು.8ನೇ ತರಗತಿ ವಿದ್ಯಾರ್ಥಿನಿ ಲಾವಣ್ಯ ಧರಣಿ ಕುಳಿತು ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಿ ದೊಡ್ಡವರಿಗೆ ಪಾಠ ಹೇಳಿದ್ದಾಳೆ. ಆದ್ದರಿಂದ ಈಕೆ ಹಚ್ಚಿದ ಅರಿವಿನ ಬೆಳಕು ಉಳಿದ ಗ್ರಾಮಗಳಿಗೂ ಪಸರಿಸಲಿಯೆಂದರು.

ಸಂಸದ ಚಂದ್ರಪ್ಪ ಮಾತನಾಡಿ ಹೇಮದಳ ಗ್ರಾಮದಲ್ಲಿ 148 ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲು ತಗಲುವ 15 ಲಕ್ಷ ವೆಚ್ಚವನ್ನು ಸಂಸದರ ನಿಧಿಯಿಂದ ನೀಡಲಾಗುವುದೆಂದರು. ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಎಚ್ ಕೆ ಪಾಟೀಲರೇ ಖುದ್ಧು ಹೇಮದಳಕ್ಕೆ ಭೈೀಟಿಯಿತ್ತು ಶೌಚಾಲಯ ನಿರ್ಮಾಣ ವಿಚಾರವಾಗಿ ಕಾಳಜಿ ತೋರಿರುವುದರಿಂದ ಉಳಿದವರಿಗೆ ಸ್ಪೂರ್ತಿ ಸಿಕ್ಕಂತಾಗಿದೆ ಎಂದರು. ಜಿಪಂ ಅಧ್ಯಕ್ಷ ಸೌಭಾಗ್ಯ ಬಸವರಾಜನ್ ಹಾಗೂ ಮಸ್ಕಲ್ ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರನಾಯ್ಕ,ತಾಪಂ ಅಧ್ಯಕ್ಷ ಚಂದ್ರಪ್ಪ.ಸದಸ್ಯ ಶಂಕರಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಸಿಇಓ ನಿತೀಶ್ ಪಟೇಲ್, ಜಿಪಂ ನ ವಿಶೇಷ ನೋಡಲ್ ಅಧಿಕಾರಿ ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin