ಪಂಜಾಬ್’ನಲ್ಲಿ 10,529 ಪೆಟ್ಟಿಗೆಗಳಲ್ಲಿದ್ದ 1 ಲಕ್ಷ ಮದ್ಯ ಬಾಟಲ್‍ಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

Punjab--01

ಚಂಡಿಗಢ, ಜ.29-ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಟಿಂಡಾ-ಡಬ್‍ವಾಲಿ ರಸ್ತೆಯ ಎರಡು ಗೋದಾಮುಗಳ ಮೇಲೆ ದಾಳಿ ನಡೆಸಿ 10,529 ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಟ್ಟಿದ್ದ 1 ಲಕ್ಷಕ್ಕೂ ಅಧಿಕ ಮದ್ಯದ ಬಾಟಲ್‍ಗಳನ್ನು ಜಪ್ತಿ ಮಾಡಲಾಗಿದೆ. ದಾಳಿಯ ಮುನ್ಸೂಚನೆ ಅರಿತು ಅಕ್ರಮ ದಾಸ್ತಾನುದಾರರು ಪರಾರಿಯಾಗಿದ್ದು, ಆರೋಪಿಗಳಿಗಾಇ ಶೋಧ ನಡೆಯುತ್ತಿದೆ.

ಬಟಿಂಡಾದಲ್ಲಿನ ಎರಡು ಹಾಳು ಬಿದ್ದ ಉಗ್ರಾಣಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಗೋದಾಮಿನಲ್ಲಿ 5,980 ಬಾಕ್ಸ್‍ಗಳು ಹಾಗೂ ಮತ್ತೊಂದರಲ್ಲಿ 4,549 ಪೆಟ್ಟಿಗಳಲ್ಲಿದ್ದ 1 ಲಕ್ಷಕ್ಕೂ ಅಧಿಕ ಮದ್ಯ ಬಾಟಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (ಐಎಂಎಫ್‍ಎಲ್) ಮತ್ತು ಬಿಯರ್ ಬಾಟಲ್‍ಗಳೂ ಸೇರಿವೆ ಎಂದು ಸಹಾಯಕ ಅಬಕಾರಿ ಮತ್ತು ತೆರಿಗೆ ಆಯುಕ್ತ ವಿ.ಪಿ. ಸಿಂಗ್ ತಿಳಿಸಿದ್ದಾರೆ.

ಇವುಗಳಲ್ಲಿ ಕೆಲವು ದಾಸ್ತಾನು ಪಂಜಾಬ್ ರಾಜ್ಯಕ್ಕೆ ಸೇರಿದ್ದರೆ, ಉಳಿದವು ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳದ್ದು. ಚುನಾವಣೆ ದಿನಾಂಕ ಪ್ರಕಟಣೆಯಾದ ನಂತರ ವಶಪಡಿಸಿಕೊಂಡ ಭಾರೀ ಪ್ರಮಾಣದ ಮಾಲು ಇದಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಫೆಬ್ರವರಿ ನಾಲ್ಕರಂದು ಪಂಜಾಬ್‍ನಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin