ಪಂಜಾಬ್ನಲ್ಲಿ ಲಂಗರು ಹಾಕಿದ್ದ ಪಾಕಿಸ್ತಾನ ದೋಣಿ ವಶಪಡಿಸಿಕೊಂಡ ಬಿಎಸ್ಎಫ್
ಈ ಸುದ್ದಿಯನ್ನು ಶೇರ್ ಮಾಡಿ
ಅಮೃತಸರ, ಅ.4– ಪಂಜಾಬ್ನ ಅಮೃತಸರ ಜಿಲ್ಲೆಯ ರಾವಿ ನದಿಯಲ್ಲಿ ಲಂಗರು ಹಾಕಿದ್ದ ಪಾಕಿಸ್ತಾನದ ಖಾಲಿ ದೋಣಿಯನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಜಫ್ತಿ ಮಾಡಿದ್ದಾರೆ. ಗುಜರಾತ್ ಕರಾವಳಿಯಲ್ಲಿ ಕರಾವಳಿ ರಕ್ಷಣಾ ಪಡೆ ಪಾಕ್ ದೋಣಿಯನ್ನು ವಶಪಡಿಸಿಕೊಂಡ ಬೆನ್ನಲ್ಲೇ ಮತ್ತೊಂದು ನೌಕೆ ಪತ್ತೆಯಾಗಿದೆ. ಭಾರತೀಯ ಜಲಗಡಿ ಪ್ರದೇಶದಲ್ಲಿದ್ದ ಪಾಕಿಸ್ತಾನಕ್ಕೆ ಸೇರಿದ ನೌಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಎಸ್ಎಫ್ ಮಹಾನಿರ್ದೇಶಕ ಕೆ.ಕೆ.ಶರ್ಮ ದೆಹಲಿಯಲ್ಲಿ ತಿಳಿಸಿದ್ದಾರೆ.
ಅಮೃತಸರ ಜಿಲ್ಲೆಯ ಟೋಟಾ ಪೋಸ್ಟ್ ಪ್ರದೇಶದಿಂದ ಈ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪತ್ತೆಯಾದ ಕೆಲವು ವಸ್ತುಗಳಿಂದ ಇದು ಪಾಕಿಸ್ತಾನಕ್ಕೆ ಸೇರಿದ ನೌಕೆ ಎಂಬುದು ಖಚಿತವಾಗಿದೆ ಎಂದು ಬಿಎಸ್ಎಫ್ನ ಪಂಜಾಬ್ ಗಡಿಯ ಡಿಐಜಿ ಆರ್.ಎಸ್.ಕಟಾರಿಯಾ ತಿಳಿಸಿದ್ದಾರೆ.
► Follow us on – Facebook / Twitter / Google+
Facebook Comments