ಪಂಜಾಬ್‍ನಲ್ಲಿ ಹೊತ್ತಿ ಉರಿದ ಖಾಸಗಿ ಬಸ್ : ಮೂವರು ಸುಟ್ಟು ಕರಕಲು

ಈ ಸುದ್ದಿಯನ್ನು ಶೇರ್ ಮಾಡಿ

Bus-Fire

ಬಟಿಂಡಾ, ಮೇ 14-ಖಾಸಗಿ ಬಸ್ಸೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದು ಮೂವರು ಪ್ರಯಾಣಿಕರು ಸಜೀವ ದಹನಗೊಂಡ ದಾರುಣ ಭಟನೆ ನಿನ್ನೆ ರಾತ್ರಿ ಪಂಜಾಬ್‍ನ ಬಟಿಂಡಾ ಜಿಲ್ಲೆಯಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಟಿಂಡಾದಿಂದ ಲೂಧಿಯಾನಾಗೆ ತೆರಳುತ್ತಿದ್ದ ರೈಯಾ ಟ್ರಾನ್ಸ್‍ಪೋರ್ಟ್ ಕಂಪನಿಗೆ(ಆರ್‍ಟಸಿ) ಸೇರಿದ ಹವಾನಿಯಂತ್ರಿತ ಐಷಾರಾಮಿ ಬಸ್ಸಿನ ಹಿಂಭಾಗದಲ್ಲಿದ್ದ ಎಂಜಿನ್‍ನಲ್ಲಿ ರಾಮ್‍ಪುರ ಫುಲ್ ಬಳಿ ಬೆಂಕಿ ಕಾಣಿಸಿಕೊಂಡಿತು.ಕೇವಲ 20 ಸೆಕೆಂಡ್‍ಗಳಲ್ಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತು. ಈ ದುರಂತದಲ್ಲಿ ಮೂವರು ಸುಟ್ಟು ಕರಕಲಾದರು. ಇತರ 23 ಮಂದಿಗೆ ಸುಟ್ಟ ಗಾಯಗಳಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ವಾಹನಗಳೊಂದಿಗೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin