ಪಂಜಾಬ್‍ನ ನಭಾ ಜೈಲ್‍ಬ್ರೇಕ್ ಪ್ರಕರಣ : ಮತ್ತಿಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Jail-Breake

ಡೆಹ್ರಾಡೂನ್, ನ.29-ಪಂಜಾಬ್‍ನ ನಭಾ ಜೈಲಿನಿಂದ ಕೆಎಲ್‍ಎಫ್ ಭಯೋತ್ಪಾದಕ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂತೆ ಆರು ಕೈದಿಗಳೊಂದಿಗೆ ಪರಾರಿಯಾಗಿದ್ದ ಜೈಲ್‍ಬ್ರೇಕ್ ಪ್ರಕರಣದ ಸೂತ್ರಧಾರಿ ಪರ್ಮಿಂದರ್ ಸಿಂಗ್ ಅಲಿಯಾಸ್ ಪೆಂಡಾನ ಇಬ್ಬರು ಆಪ್ತ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.  ಡೆಹ್ರಾಡೂನ್ ಗಿರಿಧಾಮದ ರಾಯಪುರ್ ಪ್ರದೇಶದ ಬಾಡಿಗೆ ಮನೆಯೊಂದರ ಮೇಲೆ ನಿನ್ನೆ ರಾತ್ರಿ ದಾಳಿ ನಡೆಸಿದ ಪೊಲೀಸರು ಗೀತಾ ಅರೋರಾ ಮತ್ತು ಆದಿತ್ಯ ಮೆಹ್ರಾ ಎಂಬುವನ್ನು ಬಂಧಿಸಿದ್ದಾರೆ. ಇವರ ಬಂಧನದಿಂದ ಪರಾರಿಯಾಗಿರುವ ಇತರ ಕೈದಿಗಳು ಮತ್ತು ಜೈಲು ಪರಾರಿ ಪ್ರಕರಣದಲ್ಲಿ ಶಾಮೀಲಾಗಿರುವವರ ಬಗ್ಗೆ ಮಹತ್ದದ ಸುಳಿವು ಲಭಿಸುವ ಸಾಧ್ಯತೆ ಇದೆ.

ಪರ್ಮಿಂದರ್ ಸಿಂಗ್ ಸುನಿಲ್ ಅರೋರಾನ ಪತ್ನಿ ಗೀತಾ ಮತ್ತು ಆತನ ಸಹಚರ ಮೆಹ್ರಾರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೇ ಪರ್ವಿಂದರ್ ಪಂಜಾಬ್‍ನಲ್ಲಿ ವ್ಯವಸ್ಥಿತ ಮಾದಕ ವಸ್ತು ಜಾಲ ಹೊಂದಿದ್ದು ಆ ಬಗ್ಗೆಯೂ ವಿವರ ಸಂಗ್ರಹಿಸಲಾಗುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin