ಪಕ್ಷೇತರರ ಬೆಂಬಲದಿಂದ ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ, ಪರಿಕ್ಕರ್ ಸಿಎಂ..?

ಈ ಸುದ್ದಿಯನ್ನು ಶೇರ್ ಮಾಡಿ

Manohar

ಪಣಜಿ, ಮಾ.12- ನಿನ್ನೆ ಫಲಿತಾಂಶದ ನಂತರ ಅತಂತ್ರ ಸ್ಥಿತಿ ತಲುಪಿದ್ದ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಸದ್ಯ ಗೋವಾದ 40 ಸದಸ್ಯರ ವಿಧಾನಸಭೆಯಲ್ಲಿ 17 ಸ್ಥಾನ ಪಡೆದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 13 ಸ್ಥಾನ ಗಳಿಸಿರುವ ಬಿಜೆಪಿ,ಪಕ್ಷೇತರರೊಂದಿಗೆ ನಡೆಸಿದ ಮಾತುಕತೆ ಸಫಲವಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರ್ ಪಕ್ಷೇತರ ಶಾಸಕರೊಮದಿಗೆ ನಡೆಸಿದ ಸಂಧಾನ ಫಲ ನೀಡಿದೆ.

ಈ ಹಿಂದೆ ಗೋವಾ ಮುಖ್ಯಮಂತ್ರಿಯಾಗಿ ನಂತರ ಕೇಂದ್ರಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಒಬ್ಬರಾದ ಮನೋಹರ್ ಪರಿಕ್ಕರ್ ಅವರೇ ಮತ್ತೆ ಕಡಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಬಗ್ಗೆಯೂ ಪಕ್ಷದಲ್ಲಿ ನಿರ್ಧಾರವಾಗಿದೆ ಎಂದು ತಿಳಿದು ಬಂದಿದೆ.  ಇದರಿಂದಾಗಿ ಬಿಜೆಪಿ ಉತ್ತರಪ್ರದೇಶ ಮತ್ತು ಉತ್ತರಖಂಡ್‍ಗಳಲ್ಲಿ ಮಾತ್ರವಲ್ಲದೆ ದಕ್ಷಿಣದ ಗೋವಾದಲ್ಲೂ ಮತ್ತೆ ತನ್ನ ಸಾಮ್ರಾಜ್ಯ ಸ್ಥಾಪಿಸುವುದು ನಿಶ್ಚಿತವಾದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin